ಡಾ.ದಯಾನಂದ ಶಾಸ್ತ್ರಿಗೆ ನಾಗಪುರ ಡಾ.ಬಾಬಾಸಾಹೇಬ ಅಂಬೇಡ್ಕರ ‘ರಾಷ್ಟ್ರೀಯ ಉತ್ತಮ ಶಿಕ್ಷಕ’ ಪುರಸ್ಕಾರ

ಕಲಬುರಗಿ,ಮಾ.29-ಕಲಬುರಗಿ ಎನ್.ವಿ. ಪದವಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಹಾಗು ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ದಯಾನಂದ ಶಾಸ್ತ್ರಿ ಅವರಿಗೆ ಸಾಹಿತ್ಯಿಕ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ
ನಾಗಪುರ ಜಾಗತಿಕ ಅಂಬೇಡ್ಕರವಾದಿ ಸಾಹಿತ್ಯ ಮಹಾಮಂಡಳವತಿಯಿಂದ ಡಾ.ಬಾಬಾಸಾಹೇಬ ಅಂಬೇಡ್ಕರ ‘ರಾಷ್ಟ್ರೀಯ ಉತ್ತಮ ಶಿಕ್ಷಕ’ ಪುರಸ್ಕಾರವನ್ನು ಮಾರ್ಚ26ರಂದು ನಾಗಪುರದಲ್ಲಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ ಹಾಗು ಪ್ರಾಚಾರ್ಯರು, ಸಕಲ ಸಿಬ್ಬಂದಿವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.