ಡಾ.ತಿಮ್ಮಪ್ಪ ಎನ್.ವಡ್ಡೇಪಲ್ಲಿ ಅವರಿಗೆ ಯೋಗ ವಿಜ್ಞಾನ ಪಿಹೆಚ್.ಡಿ

ರಾಯಚೂರು,ನ.೧೨- ಬಿ.ಎನ್. ಡಬ್ಲ್ಯೂ. ಪತಂಜಲಿ ಯೋಗ ಪ್ರತಿಷ್ಠಾನದ ಟ್ರಸ್ಟ್ ಅಧ್ಯಕ್ಷ ತಿಮ್ಮಪ್ಪ ಎನ್. ವಡ್ಡೇಪಲ್ಲಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ಯೋಗ ವಿಜ್ಞಾನ ವಿಷಯದಲ್ಲಿ ಪಿಹೆಚ್.ಡಿ. ಪದವಿಯನ್ನು ನೀಡಿ ಅಧಿಸೂಚನೆ ಹೊರಡಿಸಿದೆ.
ಡಾ.ತಿಮ್ಮಪ್ಪ ಎನ್.ವಡ್ಡೇಪಲ್ಲಿಯವರು ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಕೃಷ್ಣಶರ್ಮಾ ಅವರ ಮಾರ್ಗದರ್ಶನದಲ್ಲಿ ಎಫೆಕ್ಟ್ ಆಫ್ ಯೋಗಿಕ್ ಪ್ರಕಟಿಸಸ್ ವಿತ್ ಅಂಡ್ ವಿತೌಟ್ ಡಯಟ್ ಮೋಡಿಫಿಕೇಶನ್ ಆನ್ ಸೆಲೆಕಟ್ಡ ರೀಸಕ ಫ್ಯಾಕಟರಸ್ ಆಮಂಗ್ ಅಸ್ಥಮಾಟ್ಟಿಕ್ ಮೀಡಲ್ ಏಜ್ಡ ಮೇನ್ ಎನ್ನುವ ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಸಾದರಪಡಿಸಿದ್ದರು.ಡಾ. ತಿಮ್ಮಪ್ಪ ಎನ್.ವಡ್ಡೇಪಲ್ಲಿ ಅವರಿಗೆ ಇದು ಎರಡನೇ ಡಾಕ್ಟರೇಟ್ ಪದವಿ ಆಗಿದೆ. ಇದಕ್ಕಿಂತ ಮುಂಚೆ ೨೦೦೯ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸಮಾಜಶಾಸ್ತ್ರದ ಅಂತರ್ ಶಿಸ್ತಿನ ವಿಷಯದಲ್ಲಿ ಪಿಹೆಚ್.ಡಿ.ಪಡೆದಿದ್ದರು.ಕಳೆದ ೧೫ ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಯೋಗ ತರಗತಿಗಳನ್ನು ಯೋಗ ಶಿಬಿರಗಳನ್ನು ಯೋಗ ಸ್ಪರ್ಧೆಗಳನ್ನು, ನಡೆಸುತ್ತಿದ್ದಾರೆ.