ಡಾ. ಜಯಪ್ರಕಾಶ್ ಪಾಟೀಲ್ ಮೇಲೆ ಗುಂಡಿನ ದಾಳಿ

ರಾಯಚೂರು, ಆ. 31- ನಗರದ ಬೆಟ್ಟದೂರು ಆಸ್ಪತ್ರೆಯ ಮುಖ್ಯವೈದ್ಯರಾದ ಡಾ. ಜಯಪ್ರಕಾಶ್ ಪಾಟೀಲ್ ಬೆಟ್ಟದೂರು ಅವರ ಕಾರಿನ ಮೇಲೆ ಇಂದು ಮಧ್ಯಾಹ್ನದ ಸಮಯದಲ್ಲಿ ರಾಯಚೂರು ಹೊರ ವಲಯದ ಸಾತ್ ಮೈಲ್ ಹತ್ತಿರ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು ಡಾ.ಜಯಪ್ರಕಾಶ್ ಪಾಟೀಲ್ ಅವರು ಗುಂಡಿನ ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ.

ದ್ವಿಚಕ್ರವಾಹನದಲ್ಲಿ ಬಂದು ಗುಂಡಿನ ದಾಳಿ ಮಾಡಿದವರು ಯಾರೆಂದು ಇನ್ನು ತಿಳಿದುಬಂದಿಲ್ಲ,ಘಟನೆ ಕುರಿತು ರಾಯಚೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್ ಪಿ ಹಾಗೂ ಇನ್ಸ್ಪೆಕ್ಟರ್ ಭೇಟಿ ನೀಡಿ ಆರೋಪಿಗಳನ್ನು ಹುಡುಕಲು ಜಾಲಬಿಸಿದ್ದಾರೆ.

ಮೇಲ್ನೋಟಕ್ಕೆ ಗುಂಡಿನ ದಾಳಿ ಹಿಂದೆ ಯಾರೋ ಅಪರಿಚಿತರು ವೈದ್ಯರಿಗೆ ಕರೆಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು, ಅವರಿಗೆ ವೈದ್ಯರು ಹಣ ನೀಡದೆ ಇರುವುದಕ್ಕೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.