ಕಲಬುರಗಿ,ಜೂ.24-ಕಲ್ಯಾಣ ಕರ್ಬಾಟಕದ ಹೆಮ್ಮೆಯ ಸಾಹಿತಿ, ಗಜಲ್ ಗಾರ್ತಿ, ಮಹಿಳಾ-ದಲಿತ, ಶರಣ ಚಿಂತಕಿ ಡಾ.ಜಯದೇವಿ ಗಾಯಕವಾಡ ಅವರು ಡಾ.ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು ಅವರ ಸೇವೆ ಅನುಪಮ, ಅನನ್ಯವೆಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸುನೀಲ ಜಾಬಾದಿ ನುಡಿದರು.
ಅವರ ಗಾಯಕವಾಡ ಅವರ ಸ್ವನಿವಾಸಕ್ಕೆ ತೆರಳಿ ದಸಾಪ ಜಿಲ್ಲಾ ಘಟಕದಿಂದ ಸನ್ಮಾನಿಸಿ ಮಾತನಾಡಿ ಡಾ.ಗಾಯಕವಾಡ ಅವರು ಸಣ್ಣ ವಯಸ್ಸಿನಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕಾವ್ಯದ ಹೊಸ ಹೊಸ ಪ್ರಯೋಗ ಮಾಡಿದ ಪ್ರಥಮರಾಗಿದ್ದು ವಿಶೇಷ. ಹಾಯಿಕು, ಗಜಲ್, ತಂಕಾ, ರುಬಾಯಿ, ವಚನ, ಹೋರಾಟದ ಹಾಡು ರಚಿಸಿದ ಸೃಜನಶೀಲ ಲೇಖಕಿಯಾಗಿದ್ದು, ಅವರನ್ನು ಗುರುತಿಸಿ ಡಾ.ಬಸವಲಿಂಗ ಪಟ್ಟದ್ದೆವರು ಮೊಟ್ಟಮೊದಲ ದಲಿತ ಸಾಹಿತಿಗಳಿಗೆ ಪ್ರಶಸ್ತಿ ನೀಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಇರ್ವರಿಗೂ ದಸಾಪ ಅಭಿನಂದಿಸುತ್ತದೆಂದು ಹೇಳಿದರು.
ಕನ್ನಡ ಅಧ್ಯಾಪಕ ಡಾ.ವಿಜಯಕುಮಾರ ಬೀಳಗಿ ಮಾತನಾಡಿ ಯಾವ ಆಡಂಬರ ಇಲ್ಲದೇ ಅವರ ಸರಳ ವ್ಯಕ್ತತ್ವಿದಂತೆ ಅವರ ಬರಹ ಮೊನಚಾಗಿದೆ. ಇಂದಿನ ಸಾಹಿತ್ಯ ರಾಜಕಾರಣದ ಮಧ್ಯ ತಮ್ಮ ಸ್ವಪ್ರತಿಭೆ, ಸಂವೇದ ನಾಶೀಲತೆಯ ಬರಹದಿಂದ ಕನ್ನಡ ನಾಡಿನ ಎತ್ತರ ಮಟ್ಟಕ್ಕೆ ತಲುಪಿದ್ದು ಸಾಮಾನ್ಯವಲ್ಲವೆಂದರು.
ದಸಾಪ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಮಾಳಗೆ ಡಾ.ಜಯದೇವಿಯವರ ಭಾಷಣ ಹೃದಯಕ್ಕೆ ಮುಟ್ಟುತ್ತವೆ ಎಂದರು. ಡಾ.ಸಿದ್ದಪ್ಪ ಹೊಸಮನಿ ಸ್ವಾಗತಿಸಿದರು. ದಸಾಪ ಉಪಾಧ್ಯಕ್ಷ ಡಾ.ಅಶೋಕ ಬಾಬು ವಂದಿಸಿದರು. ಅಶೋಕ ಹಾಲಹಳ್ಲಿ,ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಸಂತೋಷ ಹಿರೇಮನಿ,ಶ್ರೀಪತಿ ಸಖರಾಮ ಇತರರು ಇದ್ದರು.