ಡಾ.ಜಗದೀಶ್‌ಗೆ ಅಭಿನಂದನೆ

ಕೋಲಾರ,ಮೇ.೨೯: ನೂತನವಾಗಿ ಅಧಿಕಾರ ಸ್ವೀಕರಿಸಿದ ಎಸ್.ಎನ್.ಆರ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆದ ಡಾ.ರವಿಕುಮಾರ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆದ ಡಾ.ಜಗದೀಶ್ ಇವರುಗಳು ಅಧಿಕಾರ ಸ್ವೀಕರಿಸಿದ ಸಲುವಾಗಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಮ್ಮಾರಿ ಕೊರೋನಾ ವಿರುದ್ಧ ಸಂಪೂರ್ಣವಾದ ಸಹಕಾರವನ್ನು ನೌಕರರ ಸಂಘದಿಂದ ನೀಡಲಾಗುವುದೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಅಶೋಕ್ ಕೆ.ಬಿ, ಖಜಾಂಚಿ ಕೆ.ವಿಜಯ್, ಕೆ.ಎನ್. ಮಂಜುನಾಥ್, ರವಿಚಂದ್ರನ್, ನಂದೀಶ್,ಶಿವಾರೆಡ್ಡಿ, ಮಾರುತಿ ಕುಮಾರ್, ಚಂದ್ರಕಲಾ, ರಾಮಮೂರ್ತಿ ಉಪಸ್ಥಿತರಿದ್ದರು