ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯಿಕ-ಸಾಂಸ್ಕøತಿಕ ಸಂಸ್ಥೆ ರಚನೆ

ಕಲಬುರಗಿ,ಮಾ.10-ದಲಿತ ಬಂಡಾಯ ಲೇಖಕ ದಿ.ಡಾ.ಚೆನ್ನಣ್ಣ ವಾಲೀಕಾರ ಅವರ ನೆನಪಿನಲ್ಲಿ “ಡಾ.ಚೆನ್ನಣ್ಣ ವಾಲೀಕಾರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಸಂಸ್ಥೆ” ರಚನೆ ಮಾಡಲಾಗಿದೆ.
ಈ ಸಂಸ್ಥೆಯ ಮುಖಾಂತರ ವಿವಿಧ ಸಾಹಿತ್ಯಿಕ, ಚಟುವಟಿಕೆಗಳೊಂದಿಗೆ ಅವರ ಮಹಾಕಾವ್ಯ “ವ್ಯೋಮ ವ್ಯೋಮ” ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಏಪ್ರಿಲ್ 6, ಡಾ.ಚೆನ್ನಣ್ಣ ವಾಲೀಕಾರ ಅವರ ಜನ್ಮದಿನ. ಅಂದು ಸಂಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಪ್ಪಾಸಾಹೇಬ ವಾಲೀಕಾರ, ಉಪಾಧ್ಯಕ್ಷ ಡಾ.ಕೆ.ಎಸ್.ಬಂಧು ತಿಳಿಸಿದ್ದಾರೆ.