
ಕಲಬುರಗಿ,ಮಾ.15: ಜಿಲ್ಲೆಯ ವಡಗೇರಾ ಗ್ರಾಮದ ಯುವ ಸಾಹಿತಿ, ವಿಮರ್ಶಕ ಡಾ. ಚಾಂದಸಾಬಗೆ ಮಹಾರಾಷ್ಟ್ರ ಸರ್ಕಾರದ ಮಾನ್ಯತೆ ಪಡೆದಿರುವ ” ಸಿದ್ರಾ ಬಹುದೇಶಿಯಾ ವಿಕಾಸ ಸಂಸ್ಥೆಯು ಪ್ರತಿ ವರ್ಷ ವಾರ್ಷಿಕ ರಾಷ್ಟ್ರೀಯ ಉನ್ನತ ಶಿಕ್ಷಣಕ್ಕಾಗಿ ಕೊಡುವ ಪ್ರಶಸ್ತಿಯನ್ನು “ಬೆಸ್ಟ್ ರಿಸರ್ಚ್ ಅವಾರ್ಡ್” ನೀಡಿ ಗೌರವಿಸಿದೆ.
ಕನ್ನಡ ಸಾಹಿತ್ಯ ಲೋಕ ವೈವಿಧ್ಯಮಯವಾದು, ಕಥೆ, ಕಾದಂಬರಿ, ಆತ್ಮಚರಿತ್ರೆ, ನಾಟಕ, ವಿಮರ್ಶೆ, ಸಂಶೋಧನೆ ಇತ್ಯಾದಿ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ. ಸಾಹಿತ್ಯದ ಓದು ಅವರ ಹವ್ಯಾಸವಾಗಿದೆ.
ಡಾ. ಚಾಂದಸಾಬ್ ಅವರು ಉತ್ತಮ ಸಂಶೋಧಕ ಆಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಸಾಹಿತ್ಯದ ವಿವಿಧ ಮಜಲುಗಳನ್ನು ಅಧ್ಯಯನ ಮಾಡಿ ಒಬ್ಬ ಯುವ ಸಂಶೋಧಕನಾಗಿ ಹೊರಹೊಮ್ಮಿದರಿಂದ ಅವರಿಗೆ ಈ ಅವಾರ್ಡ್ ನೀಡಿ ಗೌರವಿಸಲಾಯಿತು.