ಡಾ.ಗುರುಪಾದಪ್ಪ ನಾಗಮಾರಪಳ್ಳಿ ಉದ್ಯಾನವನಕ್ಕೆ ಚಾಲನೆ

ಬೀದರ್:ನ.12: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರವು ನಗರದ ಗುರುನಾನಕ ಝೀರಾ ಸಮೀಪದ ಉದ್ಯಾನಕ್ಕೆ ದಿ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಹೆಸರು ಇಟ್ಟಿದೆ.
. ಗುರುಪಾದಪ್ಪ ನಾಗಮಾರಪಳ್ಳಿ ಅವರ 80ನೇ ಜನ್ಮದಿನದ ಪ್ರಯುಕ್ತ ಉದ್ಯಾನಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಹೇಳಿದರು.
ನಾಗಮಾರಪಳ್ಳಿ ಅವರು ಸ್ವಸಹಾಯ ಗುಂಪುಗಳ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಮಹಿಳಾ ಸ್ವಾವಲಂಬನೆಗೆ ಪ್ರಯತ್ನಿಸಿದ್ದರು ಎಂದು ಹೇಳಿದರು.
ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಎನ್.ಎಸ್.ಎಸ್.ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮುಖಂಡರಾದ ಸೋಮಶೇಖರ ಪಾಟೀಲ ಗಾದಗಿ, ಬಸವರಾಜ ಧನ್ನೂರ, ಶಕುಂತಲಾ ಬೆಲ್ದಾಳೆ, ಸುಭಾಷ್ ಮಡಿವಾಳ, ಗಣೇಶ, ರೋಶನ್ ವರ್ಮಾ, ನಿತಿನ್ ನವಲಕಿಲೆ, ಶಶಿಕುಮಾರ ಪಾಟೀಲ, ವಿಜಯಕುಮಾರ ಪಾಟೀಲ ಯರನಳ್ಳಿ, ಚಂದ್ರಶೇಖರ ಪಾಟೀಲ, ಎಸ್.ಬಿ. ಪಾಟೀಲ, ಸತೀಶ್ ನೌಬಾದೆ ಇದ್ದರು.ಬಿಜೆಪಿ ಬೀದರ್ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ ನಿರೂಪಿಸಿದರು.