ಡಾ.ಕೈಲಾಸನಾಥ ಶ್ರೀಗಳಿಗೆ ಪುಟ್ಟರಾಜ ಗವಾಯಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ

ಕೊಲ್ಹಾರ:ಫೆ.28: ಗದಗನ್ನೆ ಗದ್ದುಗೆಯನ್ನಾಗಿ ಮಾಡಿಕೊಂಡಿದ್ದ ಸಂಗೀತ ಸಾರ್ವಭೌಮ ಸಪ್ತಸ್ವರ ಮಹರ್ಷಿ ಪಂಡಿತ ಪುಟ್ಟರಾಜ ಗವಾಯಿಗಳ 110 ನೇ ಜಯಂತೋತ್ಸವದ ಪ್ರಯುಕ್ತ ಗದಗ ನಗರದ ಡಾ.ವಿ.ಬಿ ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಇವರ ವತಿಯಿಂದ ಕೊಡಮಾಡುವ ಪಂಡಿತ ಗುರು ಪುಟ್ಟರಾಜ ಗವಾಯಿಗಳ ರಾಷ್ಟ್ರೀಯ ಸಧ್ಭಾವನಾ ಪ್ರಶಸ್ತಿ ಪಟ್ಟಣದ ಶೀಲವಂತ ಹಿರೇಮಠದ ಘ.ಮ.ಪೂ ಧರ್ಮರತ್ನ ಡಾ.ಕೈಲಾಸನಾಥ ಮಹಾಸ್ವಾಮಿಗಳಿಗೆ ಲಭಿಸಿದೆ.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಪುರಾಣ ಪ್ರವಚನ ಸಾಧನೆಗೆ “ಬಸವಜ್ಞಾನ ಪ್ರವಚನ ಭಾಸ್ಕರ ಪ್ರಶಸ್ತಿ”, ಸ್ವಾಮಿ ವಿವೇಕಾನಂದರ ತತ್ವ ಸಿದ್ದಾಂತ ಭೋಧನೆಗೆ “ಕರ್ನಾಟಕ ಯುವಕೇಸರಿ ಪ್ರಶಸ್ತಿ”, ಕೈವಲ್ಯ ಜ್ಞಾನ ಆಧ್ಯಾತ್ಮ ಭೋಧನೆಗೆ “ಆರೂಡ ಜ್ಯೋತಿ ಪ್ರಶಸ್ತಿ”, ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರದಲ್ಲಿ “ಅಭಿನವ ಶ್ರವಣ ಕುಮಾರ ಶ್ರೀ ಪ್ರಶಸ್ತಿ, “ಗುರು ಪಂಚಾಕ್ಷರಿ ಗವಾಯಿಗಳ ರಾಷ್ಟ್ರೀಯ ಪ್ರಶಸ್ತಿ”, ಬಸವಾದಿ ಶಿವಶರಣರ ತತ್ವ ಸಿದ್ದಾಂತ ಆಚರಣೆಯಲ್ಲಿ ಜಂಗಮ ಸಾಧನೆಗೆ “ಹಾನಗಲ್ ಗುರು ಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ”,
ರಾಷ್ಟ್ರೀಯ ಭಾವೈಕ್ಯತಾ ಫೌಂಡೇಶನ್ ಇವರಿಂದ “ಧರ್ಮರತ್ನ ಪ್ರಶಸ್ತಿ” ದೇಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದಿಂದ “ಗೌರವ ಡಾಕ್ಟರೇಟ್ ಪದವಿ ಪ್ರದಾನ” ಹೀಗೆ ಹತ್ತು ಹಲವಾರು ಪುರಸ್ಕಾರ ಪಡೆದು ಕೊಲ್ಹಾರ ಕೀರ್ತಿಯನ್ನು ಶ್ರೀಗಳು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.