ಡಾ.ಕೆ.ಸಿ.ನಾರಾಯಣಗೌಡರವರು 61ನೇ ಹುಟ್ಟುಹಬ್ಬ ಆಚರಣೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.22: ಡಾ.ಕೆ.ಸಿ.ನಾರಾಯಣಗೌಡ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು 61ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮಾಜಿ ಸಚಿವರ ನಿವಾಸದ ಆವರಣದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು.ಸಾವಿರಾರು ಅಭಿಮಾನಿಗಳು ಮಾಜಿ ಸಚಿವರ ನಿವಾಸಕ್ಕೆ ಆಗಮಿಸಿ ಕೆ.ಸಿ.ನಾರಾಯಣಗೌಡರಿಗೆ ಪೇಟ ತೊಡಿಸಿ ಹಾರ ತುರಾಯಿ ಅರ್ಪಿಸಿ ಶುಭಾಶಯ ಕೋರಿದರು. ಸಚಿವರ ನಿವಾಸದ ಆವರಣದಲ್ಲಿ ಕೆ.ಸಿ.ನಾರಾಯಣಗೌಡ ಕೇಕ್ ಕತ್ತರಿಸಿ ತಮ್ಮ ಅಭಿಮಾನಿಗಳಿಗೆ ಕೇಕ್ ತಿನ್ನಿಸುವ ಮೂಲಕ ಹುಟ್ಟಹಬ್ಬದ ಆಚರಣೆಯನ್ನು ಸಂಭ್ರಮಿಸಿದರು.ಇದೇ ಸಂದರ್ಭದಲ್ಲಿ ನಾರಾಯಣಗೌಡ ಅಭಿಮಾನಿ ಬಳಗದ ಅಧ್ಯಕ್ಷ ಪಿ.ಚಂದ್ರಮೋಹನ್ ಮತ್ತು ಸಂಗಡಿಗರು ಬೆಳ್ಳಿ ಗದೆ ನೀಡಿ ಗೌರವಿಸಿದರು.
ಮಾಜಿ ಸಚಿವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಅಭಿಮಾನಿಗಳು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರಲ್ಲದೆ ಹುಟ್ಟುಹಬ್ಬದ ನೆನಪಿಗಾಗಿ ಮಾಜಿ ಸಚಿವರ ನಿವಾಸದ ಬಳಿ ಸಾವಿರಾರು ತೆಂಗಿನ ಸಸಿಗಳನ್ನು ಅಭಿಮಾನಿಗಳಿಗೆ ವಿತರಿಸಲಾಯಿತು.ಕೆ.ಸಿ.ಎನ್ ಅಭಿಮಾನಿ ಬಳಗದ ಅಧ್ಯಕ್ಷ ಪಿ.ಚಂದ್ರಮೋಹನ್ ಮತ್ತು ಮಾಜಿ ಸಚಿವರ ಆಪ್ತ ಸಹಾಯಕ ದಯಾನಂದ್ ನೇತೃತ್ವದಲ್ಲಿ ಆಚರಿಸಲ್ಪಟ್ಟ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಕಿಕ್ಕೇರಿ ಪ್ರಭಾಕರ್,ಮಂಡ್ಯ ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಶೀಳನೆರೆ ಅಂಬರೀಶ್, ಪುರಸಭಾ ಅಧ್ಯಕ್ಷೆ ಮಹಾದೇವಿ, ಸದಸ್ಯ ಕೆ.ಎಸ್.ಸಂತೋಷ್ ಕುಮಾರ್,ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ಮನ್ ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ,ಗ್ರಾ.ಪಂ.ಸದಸ್ಯ ಕರ್ತೇನಹಳ್ಳಿ ಸುರೇಶ್, ಪಾಂಡವಪುರದ ಬಿಜೆಪಿ ಮುಖಂಡ ಡಾ.ಇಂದ್ರೇಶ್ ಸೇರಿದಂತೆ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.