ಡಾ. ಕೆ. ಜೈಮುನಿಗೆ  ‘ಭಾರತೀಯ ಸಾಂಸ್ಕೃತಿಕ ಯೋಗರತ್ನ’ ಪ್ರಶಸ್ತಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೯ : ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು  ಇವರ ಆಶ್ರಯದಲ್ಲಿ  ಗದಗ ನಗರದ ಡಾ. ಅಂಬೇಡ್ಕರ್ ಸಭಾಭವನದಲ್ಲಿ 9ನೇ ಅಖಿಲ ಭಾರತ ಸಾಂಸ್ಕೃತಿಕ ಸಮ್ಮೇಳನ ಮತ್ತು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ನುಡಿಸಿರಿ  ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಂತರಾಷ್ಟ್ರೀಯ ಯೋಗಪಟು ಯೋಗಚಾರ್ಯ ಡಾಕ್ಟರೇಟ್‌ ಪುರಸ್ಕೃತರಾದ ಕೆ. ಜೈಮುನಿ ಅವರಿಗೆ ‘ಭಾರತೀಯ ಸಾಂಸ್ಕೃತಿಕ ಯೋಗರತ್ನ’ ಪ್ರಶಸ್ತಿಯನ್ನು ಸಂಸ್ಥೆಯ ರಾಜ್ಯಾಧ್ಯಕ್ಷ ಮನೋಹರ್ ನಾಯಕ್  ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್  ಮತ್ತು ಹಿರಿಯ ಸಾಹಿತಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು