ಡಾ.ಕೆ.ಕೆ ಕಿರಣ್ ಗೆ ಪಿಹೆಚ್ ಡಿ

ದಾವಣಗೆರೆ.ಏ.೮; ಬೆಂಗಳೂರಿನ ಎಸ್.ಜೆ.ಬಿ.ಐ.ಟಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಕೆ.ಕೆ. ಕಿರಣ್ ಇವರು ‘ಭೂಕಂಪ ಮತ್ತು ಬೆಂಕಿ ಅನಾಹುತದಿಂದ ಕಟ್ಟಡಗಳ ಅದುರುವಿಕೆ ತಡೆಗಟ್ಟುವ ಬಗ್ಗೆ’ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿ ಗೌರವಿಸಿದೆ.
ಡಾ.ಕೆ.ಕೆ. ಕಿರಣ್ ಅವರು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕೆ. ಕೃಷ್ಣೇಗೌಡ ಇವರ ಪುತ್ರರಾಗಿದ್ದು, ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಜಿ. ಜಗದೀಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.