ಡಾ. ಕೆ.ಕೃಷ್ಣಮೂರ್ತಿಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ


ಧಾರವಾಡ,ಏ.13: ಡಾ. ಕೆ. ಕೃಷ್ಣಮೂರ್ತಿಯವರು ಪ್ರತಿಭೆ ಮತ್ತು ಪಾಂಡಿತ್ಯಗಳ ಆಗರವಾಗಿದ್ದರು. ಇವೆರಡನ್ನು ಸಮಸಮವಾಗಿ ಮೈಗೂಡಿಸಿಕೊಂಡ ಶ್ರೇಷ್ಠ ವಿದ್ವಾಂಸರಾಗಿದ್ದರು ಎಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಡಾ. ಕೆ. ಕೃಷ್ಣಮೂರ್ತಿ ಜನ್ಮಶತಮಾನೋತ್ಸವ ಸಮಿತಿ, ಮೈಸೂರು ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಕೆ. ಕೃಷ್ಣಮೂರ್ತಿಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಡಿನ ಅನೇಕ ಕಡೆಗಳಲ್ಲಿ ಶತಮಾನೋತ್ಸವ ಡಾ. ಕೆ. ಕೃಷ್ಣಮೂರ್ತಿಯವರ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ, ಇದರಂಗವಾಗಿ ನಾಡಿನ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಯೂ ಈ ಕಾರ್ಯಕ್ರಮ ಜರುಗಿದ್ದು ವಿಶೇಷವಾದದ್ದು ಎಂದರು.
ಮುಂದುವರೆದು ಮಾತನಾಡಿದ ಅವರು ಕನ್ನಡ, ಇಂಗ್ಲೀಷ, ಸಾಂಸ್ಕøತ, ಪಾಕೃತ ಹೀಗೆ ಬಹುಭಾಷಾ ತಜ್ಞರಾಗಿದ್ದರು. ಹೀಗಾಗಿ ಅವರಿಗೆ ವಿದ್ವತ್ತಿನ ಸಮುದ್ರದಲ್ಲಿ ಲೀಲಾಜಾಲವಾಗಿ ಈಜಾಡಲು ಸಾಧ್ಯವಾಯಿತು. ಆನಂದವರ್ಧನನ ಧ್ವನ್ಯಾಲೋಕ ಕುರಿತ ಸಂಶೋಧನ ಮಹಾಪ್ರಬಂಧ ಭಾರತೀಯ ಸಂಶೋಧನಾ ಮಹಾಪ್ರಬಂಧಗಳಲ್ಲಿಯೇ ಅತ್ಯಂತ ಮೌಲಿಕವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಸಂಸ್ಕøತದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಹೆಗ್ಗಳಿಕೆ ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ. ಅವರು ವಿದ್ವತ್ ಲೋಕದ ಪುಣ್ಯಪುರುಷರಾಗಿದ್ದರಲ್ಲದೇ ವಿದ್ವತ್ ಪ್ರಪಂಚದ ಮಾರ್ತಾಂಡ (ಸೂರ್ಯ) ಎನಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕøತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೇಯೂರ ಕರಗುದರಿ ಡಾ. ಕೆ. ಕೃಷ್ಣಮೂರ್ತಿವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿ, ಕೃಷ್ಣಮೂರ್ತಿಯವರು ಅತ್ಯಂತ ಕಡುಬಡತನದಲ್ಲಿ ಓದಿ ಅನೇಕ ಕಡೆಗಳಲ್ಲಿ ಸಂಸ್ಕøತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕøತ ವಿಭಾಗವನ್ನು ಕಟ್ಟಿಬೆಳೆಸಿದರು. ನೂರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಅನೇಕ ಶಾಸ್ತ್ರ ವಿಷಯಗಳನ್ನು ಬಲ್ಲವರಾಗಿದ್ದ ಅವರು ಯಾವುದೇ ಕೃತಿಗಳನ್ನು ರಚಿಸುವಾಗ ಮೂಲ ಆಕರಗಳನ್ನು ಆಧಾರವಾಗಿ ಕೊಡುತ್ತಿದ್ದರು. ಅವರ ವಿದ್ವತ್ ತುಂಬ ವಿಶಿಷ್ಠವಾಗಿತ್ತು ಎಂದು ಹೇಳಿದರು.
ಮೈಸೂರಿನ ಡಾ. ಕೆ. ಕೃಷ್ಣಮೂರ್ತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ. ಲೀಲಾ ಅವರು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂವಾದದಲ್ಲಿ ಡಾ. ಶ್ರೀಧರಶಾಸ್ತ್ರಿ ಇನಾಂದಾರ, ಡಾ. ಪದ್ಮಾವತಿ ಎಂ. ಸಿಂಗಾರಿ, ಶ್ರೀ ರವೀಂದ್ರಕುಮಾರ, ಶ್ರೀಮತಿ ವಿ. ಎಸ್. ಚೇತನಾ ಅವರು ಭಾಗವಹಿಸಿದ್ದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಸಂಜೀವ ಕುಲಕರ್ಣಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಶಾಮಸುಂದರ ಬಿದರಕುಂದಿ, ಹನುಮಾಕ್ಷಿ ಗೋಗಿ, ಶ್ರೀಮತಿ ಸರಸ್ವತಿ, ಧೀಮತಿ, ರಾಜಶ್ರೀ, ಜಯಶ್ರೀ, ಮನೋಹರ, ಪ್ರಣಿತಕುಮಾರು, ಸಿ.ಎನ್. ಕೇಶವಪ್ರಕಾಶ, ಮನೋಹರ, ಬಿ. ಎಸ್. ಶಿರೋಳ, ಡಾ. ಶಶಿಧರ ನರೇಂದ್ರ ಕೆ. ಕೃಷ್ಣಮೂರ್ತಿಯವರ ಕುಟುಂಬದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.