ಡಾ. ಕೃತಿಕಾ ಕನಸೆಯವರಿಗೆ ಸನ್ಮಾನ

ಭಾಲ್ಕಿ : ಎ.12:ಪಟ್ಟಣದ ಸುಭಾಷ ಚೌಕನ ಬಾಲಾಜಿ ನಗರದಲ್ಲಿನ ಬಾಲಾಜಿ ಸಹಕಾರ ಸಂಘದ ವತಿಯಿಂದ ಸಂಘದ ಸಂಚಾಲಕರಾದ ಪ್ರಭು ಡಿಗ್ಗೆಯವರ ನಿವಾಸದಲ್ಲಿ ಮರಾಠಾ ಸಮಾಜದ ಹಿರಿಯ ಮುಖಂಡರಾದ ಯಾದವರಾವ ಕನಸೆಯವರ ಸೊಸೆ ಕರ್ನಾಟಕ ರಾಜ್ಯ ಜಿಜಾವು ಮಹಿಳಾ ಘಟಕದ ರಾಜ್ಯ ಅಧ್ಯಕ್ಷರಾದ ಡಾ. ಕೃತಿಕಾ ವಿಲಾಸ ಕನಸೆಯವರಿಗೆ ಎಮ್.ಬಿ.ಬಿ.ಎಸ್. ಎಮ್.ಡಿ.(ಅನೆಸ್ಥೇಷಿಯಾ) ಇವರ ಸಾಧನೆಯನ್ನು ಗಮನಿಸಿ ಸಂಘದ ಅಧ್ಯಕ್ಷರಾದ ಸೋಮನಾಥ ಮೂಲಗೆ ಹಾಗೂ ನಿವೃತ್ತ ತಹಶೀಲ ಕಛೇರಿಯ ಅಧಿಕಾರಿ ವಿಠಲರಾವ ಸಾಳುಂಕೆಯವರ ನೇತೃತ್ವದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಡಾ.ಕೃತಿಕಾ ಇವರ ಸೇವೆ ನಮ್ಮ ನಾಡಿನ ಸಮಸ್ಥ ಜನರಿಗೆ ಸಿಗುವಂತಾಗಬೇಕು, ಕಿರಿ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ ಮೆಚ್ಚುವಂಥದ್ದು ಎಂದು ಬಡಾವಣೆಯ ಹಿರಿಯ ಪತ್ರಕರ್ತರಾದ ಸೋಮನಾಥ ಮುದ್ದಾ ನುಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಗಣಪತಿ ಬೋಚರೆ, ನಾಗರಾಜ ಮಡ್ಡೇರ, ಗುರುರಾಜ ಸೆಡೋಳೆ, ನಾಮದೇವ ಬಿರಾದಾರ, ಸುಭಾಷ ಶೆಟಕಾರ, ಮಧುಕರ ಮಾಟೆ, ಪ್ರೊ.ಶಿವಾಜಿರಾವ ಜಗತಾಪ, ಪಾಂಡುರಂಗ ಪಾಟೀಲ, ಶಿವಪುತ್ರ ಕಲ್ಯಾಣೆ, ತಾಲೂಕು ಕ.ಸಾಪ. ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಡಿಗ್ಗೆ ಸೇರಿದಂತೆ ಬಾಲಾಜಿ ಸಹಕಾರ ಸಂಘದ ಎಲ್ಲಾ ಸದಶ್ಯರು ಇದ್ದರು.