ಡಾ. ಕರ್ಜಗಿ ನೇಮಕದಿಂದ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ: ದಲಿತ ಸಾಹಿತ್ಯ ಪರಿಷತ್ ಆರೋಪ

ಕಲಬುರಗಿ,ಏ.3: ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಸ್ಕøತಿ ಮಾಲೆಯ ಅಡಿಯಲ್ಲಿ 30 ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಪ್ರಧಾನ ಸಂಪಾದಕರಾಗಿ ಡಾ. ಗುರುರಾಜ್ ಕರ್ಜಗಿ ಅವರನ್ನು ನೇಮಕ ಮಾಡಲಾಗಿದೆ. ಇದು ಸಮಂಜಸವಲ್ಲ ಎಂದು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುನೀಲ್ ಜಾಬಾದಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ಜಗಿ ಅವರ ನೇಮಕದಿಂದ ಕಲ್ಯಾಣ ಕರ್ನಾಟಕದ ಹಿರಿಯ ವಿದ್ವಾಂಸರಿಗೆ, ಸಾಹಿತಿಗಳಿಗೆ, ತಜ್ಞರಿಗೆ ಅನ್ಯಾಯ ಮಾಡಿದಂತಾಗಿದೆ. ಅಲ್ಲದೇ ಪುಸ್ತಕಗಳ ಸಂಪಾದನೆಯಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘವು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಕಲ್ಯಾಣ ಕರ್ನಾಟಕ ಸಾಂಸ್ಕøತಿಕ, ಕಲೆ ಹಾಗೂ ಧಾರ್ಮಿಕ ಮತ್ತು ಚಾರಿತ್ರಿಕ ಪರಂಪರೆಯನ್ನು ದಾಖಲಿಕರಣ ಮಾಡುವ ಉದ್ದೇಶವನ್ನು ಹೊಂದಿದೆ. ಸಂಘವು ಡಾ. ಬಸವರಾಜ್ ಪಾಟೀಲ್ ಸೇಡಂ ಅವರ ಅಧ್ಯಕ್ಷತೆಯಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಸಮಿತಿಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವಲ್ಲಿ ಒಬಿಸಿ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಸಂಘದ ಕಾರ್ಯ ಚಟುವಟಿಕೆಗಳು ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರ್ಗಿ ಸೇರಿ ಎರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನುಳಿದ ಐದು ಜಿಲ್ಲೆಗಳನ್ನು ಹೊರಗಿಡುವ ಮೂಲಕ ಪ್ರಾದೇಶಿಕ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಯೋಜನೆಯಲ್ಲಿ ಚರಿತ್ರೆ, ಸಾಹಿತ್ಯ, ಸಂಸ್ಕøತಿ ಮತ್ತು ವ್ಯಕ್ತಿತ್ವ ಕುರಿತು ಬರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಅಲ್ಲಿಯೂ ಕೂಡ ಕಲ್ಯಾಣ ಕನಾಟಕದ ಸಾಹಿತ್ಯ, ಸಂಸ್ಕøತಿ, ಚರಿತ್ರೆಯನ್ನು ಕಟ್ಟು ಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಸನ್ನತಿಯ ಬೌದ್ಧರ ಕುರುಹುಗಳು, ಜೈನರ ಸಾಹಿತ್ಯ, ಮುಸ್ಲಿಂರ ಭಾವೈಕ್ಯತೆಯ ಸಂಕೇತವಾದ ಖಾಜಾ ಬಂದೇ ನವಾಜ್ ದರ್ಗಾ ಹಾಗೂ ಸೋಫಿಗಳು, ಹರಿದಾಸರು, ತತ್ವಪದಕಾರರು, ಸುರಪುರ ಸಂಸ್ಥಾನದ ಚರಿತ್ರೆ ಮತ್ತು ಇವೆಲ್ಲವುಗಳನ್ನು ಕಡೆಣಿಸಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.
ತತ್ವಪದಕಾರರಾದ ಕೊನ್ನಳ್ಳಿ ಹೊನ್ನಪ್ಪ ಮಹಾರಾಜರು, ಜಂಬಿಗಿ ಶರಣರು, ಪಂಚಶೀಲ ಗವಾಯಿಗಳು, ಅಷ್ಟೇ ಅಲ್ಲದೇ ಸಾಮಾಜಿಕ ಹೋರಾಟಗಾರರಾದ ಬಿ. ಶ್ಯಾಮಸುಂದರ್, ಮೋಘಾ, ಮಲ್ಲಪ್ಪ ಕೋರವಾರ್, ಗಾಳಪ್ಪ ಪೂಜಾರಿ, ಇನ್ನು ರಾಜಕೀಯವಾಗಿ ಜೆ.ಪಿ. ಸರ್ವೇಶ್, ನಾಗರತ್ನ, ಸೇಡಂ ತಾಲ್ಲೂಕಿನ ರಾಠೋಡ್ ಅವರ ಚರಿತ್ರೆಯನ್ನು ಮುಖ್ಯ ವಾಹಿನಿಗೆ ತರದೇ ಕೇವಲ ಒಂದೇ ಸಮುದಾಯವನ್ನು ಕೇಂದ್ರೀಕರಿಸಿ ಸೀಮಿತಗೊಳಿಸಿದ್ದಾರೆ. ಆದ್ದರಿಂದ ಈ ಸಂಪುಟಗಳಲ್ಲಿ ಕೇವಲ ಒಂದು ಸಮುದಾಯದ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಟ್ಟಂತಾಗಿದೆ. ಇದು ಸರ್ಕಾರದ ಯೋಜನೆಯಾಗಿದ್ದರಿಂದ ಕಲ್ಯಾನ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದವರಿಗೆ ಅದರ ಅಡಿಯಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಗೆ ಕೇಳಿದರೆ ಮಾಹಿತಿ ನೀಡುತ್ತಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಒಂದು ಸಮುದಾಯದ ಚರಿತ್ರೆ, ಸಂಸ್ಕøತಿಯನ್ನು ಕಟ್ಟಿಕೊಟ್ಟಂತಾಗುತ್ತದೆ ಎಂದು ಅವರು ಆಕ್ಷೇಪಿಸಿದರು.
ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಮತ್ತು ಕಲ್ಯಾಣರಾವ್ ಪಾಟೀಲ್ ಹಾಗೂ ಯೋಜನೆಯಲ್ಲಿರುವ ಪ್ರಜ್ಞಾವಂತರು, ಬುದ್ದಿಜೀವಿಗಳು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದ ಅವರು, ಸರ್ಕಾರದ ಯೋಜನೆಗಳಲ್ಲಿ ಸಮಾನ ಪಾಲು, ಸಮಾನ ಹಕ್ಕು ನೀಡಬೇಕು ಮತ್ತು ಎಲ್ಲರಿಗೂ ಸಮಾನವಾದ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಇಂತಹ ದ್ವಂದ್ವ ನೀತಿಯನ್ನು ಅನುಸರಿಸಿದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಗವಿಸಿದ್ದಪ್ಪ ಪಾಟೀಲ್ ಹಾಗೂ ಶಿವರಾಜ್ ಪಾಟೀಲ್ ಅವರು ಉಪಸ್ಥಿತರಿದ್ದರು.