ಡಾ. ಕರ್ಜಗಿಗೆ ಬಾಣವಾಣೀವಿಲಾಸ ಪ್ರಶಸ್ತ್ರಿ


ಧಾರವಾಡ ಮಾ.15: ನಗರದ ವಿದ್ಯಾಸ್ಥಾನವಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ನಿತ್ಯ ಜಿವನದಲ್ಲಿ ಅದ್ವೈತ ಈ ವಿಷಯವನ್ನಾಧರಿಸಿ ಡಾ. ಗುರುರಾಜ ಕರ್ಜಗಿಯವರು ವಿಶೇಷ ಉಪನ್ಯಾಸವನ್ನು ನೀಡಿದರು.
ಶಂಕರಾಚಾರ್ಯರು ಸಮಸ್ತ ಜಗತ್ತಿಗೆ ತಮ್ಮ ಅದ್ವೀತಿಯವಾದ ಗ್ರಂಥಗಳನ್ನು ನೀಡಿ ಉಪಕರಿಸಿದ್ದಾರೆ. ಅವರು ಸಮಾಜದ ಏಕತೆಗೆ ಮತ್ತು ಜೀವನದ ಪರಿಪೂರ್ಣತೆಗೆ ಆವಶ್ಯಕವಾದ ವಿಷಯಗಳನ್ನು ತಮ್ಮ ಗ್ರಂಥಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಹಾಗೂ ಸುಂದರವಾಗಿ ವರ್ಣಿಸಿದ್ದಾರೆ ಎಂದು ತಿಳಿಸಿದರು.
ಶಾಂಕರ ಭಾಷ್ಯದಲ್ಲಿ ಹೇಳಿರುವ ವಿಷಯಗಳನ್ನು ನಾವು ತಿಳಿದುಕೊಂಡು ನಮ್ಮ ಮಕ್ಕಳಿಗೆ ಆ ವಿಷಯಗಳನ್ನು ಬೋಧಿಸುವುದು ತಂದೆ ತಾಯಿಯರ ಕರ್ತವ್ಯವೆಂದು ಹೇಳಿದರು. ಅವರನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ವತಿಯಿಂದ ಪಂಡಿತಪ್ರಕಾಂಡ ಭಾಲಚಂದ್ರ ಶಾಸ್ತ್ರಿಗಳ ಸ್ಮರಣಾರ್ಥ ಬ್ರಹ್ಮಶ್ರೀ ಪ್ರಶಸ್ತಿಯನ್ನು ನೀಡಿ ಬಾಣವಾಣೀವಿಲಾಸ ಎಂಬ ಬಿರುದಿನಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗೇಶ ಶಾಸ್ತ್ರೀ, ವಿದ್ವಾನ್ ವಾಚಸ್ಪತಿಶಾಸ್ತ್ರೀ , ಶಿವಸ್ವಾಮಿ ಜೋಶಿ, ಚಂದ್ರಶೇಖರಶಾಸ್ತ್ರೀ, ಆರ್ ಎಸ್ ಜೋಶಿ , ಮಹೇಶ ಹಂಪಿಹೊಳಿ , ಕೃಷ್ಣಾ ಬಾಗಲವಾಡಿ, ಹರ್ಶ ಡಂಬಳ , ವಿಜಯ ನಾಡಜೋಶಿ, ಆರ್ ಬಿ ಕುಲಕರ್ಣಿ, ರಾಜು ಕುಲಕರ್ಣಿ, ಶ್ರೀ ಕಾಕನಕಿ , ಶಂಕರ ಕುಲಕರ್ಣಿಇನ್ನಿತರರು ಉಪಸ್ಥಿತರಿದ್ದರು.