ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಕ್ಷನ ರಾಷ್ಟ್ರಮಟ್ಟದ ಆನ್‍ಲೈನ್ ಚಿತ್ರಕಲಾ ಸ್ಪರ್ಧೆ ಯಶಸ್ವಿ

ಬೀದರ,ನ.21- ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಫೌಂಡೇಕ್ಷನ ಬೀದರ ವತಿಯಿಂದ ಬೀದರ ಜಿಲ್ಲೆಯಲ್ಲಿಯೇ ರಾಷ್ಟ್ರೀಯ ಮಟ್ಟದ ಆನ್‍ಲೈನ್ ಚಿತ್ರಕಲಾ ಸ್ಪರ್ಧೆಯ ಮೊಟ್ಟ ಮೊದಲಿಗೆ ಹಮ್ಮಿಕೊಳ್ಳಲಾಗಿದ್ದು ಸುಮಾರು ಒಂದು ತಿಂಗಳಿಮದ ನಡೆಯುತ್ತಿದೆ.
ಭಾರತ ರತ್ನ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ರವರ ಜನ್ಮದಿನ ಸ್ಮರಣಿಯವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ರಾಷ್ಟ್ರದ ಎಲ್ಲಾ ರಾಜ್ಯಗಳಿಂದ ಚಿತ್ರಕಲಾವಿದರು ಮತ್ತು ಕಲಾ ಆಸಕ್ತರು. ಹಾಗೂ ವಿದ್ಯಾರ್ಥಿಗಳು ಸಹ ಭಾಗವಹಿಸಿದರು.
ಇಂತಹ ಮಹಾಮಾರಿ ಕೋವಿಡ್-19 ಸಂದರ್ಭದಲ್ಲಿಯು ಸಹ ಫೌಂಡೇಕ್ಷನ ಅಧ್ಯಕ್ಷರಾದ ಜಾಶ್ವಾ ಇಮಾನವೇಲ್ ರವರು ಸರಕಾರದ ನಿಯಮಮಾನುಸಾರ ಕಲಾವಿದರು ವಿದ್ಯಾರ್ಥಿಗಳು ಕಲಾಕಾರರು ತಮ್ಮ ಮನೆಯಲ್ಲಿಯೇ ಕುಳಿತು ಆನ್‍ಲೈನ್ ಮೂಲಕ ಸ್ಪರ್ಧೆ ಮಾಡಿಸಿದ್ದು ಒಂದು ವಿಶೇಷವಾಗಿದೆ.
ಅಧ್ಯಕ್ಷರು ಮತ್ತು ಸದಸ್ಯರು ರಾಷ್ಟ್ರೀಯ ಚಿತ್ರ ಕಲಾ ಸ್ಪರ್ಧೆಯ ಏರ್ಪಡಿಸಿ ಯಶಸ್ವಿಯಾಗಿದೆ. ಇದೇ ಮೊಟ್ಟ ಮೊದಲ ಬಾರಿ ರಾಷ್ಟ್ರೀಯ ಮಟ್ಟ ಆನ್‍ಲೈನ್ ಸ್ಪರ್ಧೆಯಾಗಿದು ಬೀದರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಪ್ರತಿಯೊಬ್ಬರಲ್ಲಿಯು ಸಹ ಬಂದು ಕಲೆಯು ಅಡಗಿರುತ್ತದೆ. ಚಿತ್ರಕಲೆಯೊಂದು ತನ್ನ ಅನಿಸಿಕೆ ಅಥವಾ ಭಾವನೆಗಳು ಸಂಬಂಧಗಳು ಚಿತ್ರದರೂಪದಲ್ಲಿ ಹೊರ ಬರುತ್ತದೆ.
ಸ್ಪರ್ಧೆಯ ತೀರ್ಪುಗಾರರಾದ ಸಂದೀಪ ರಾವಲ್ ಮುಂಬೈ ಭಾರತದ ಪ್ರತಿಷ್ಠಿತÀ ಪ್ರಸಿದ್ಧ ಕಲಾವಿದರು ಸ್ಪರ್ಧೆಗೆ ಅತಿ ಉನ್ನತವಾದ ತಿರ್ಪನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಭಾಗವಹಿಸಿದ ಎಲ್ಲಾ ಕಲಾವಿಧರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕಲಾ ಆಸಕ್ತರಿಗೆ ಮತ್ತು ಸ್ಪರ್ಧೆಗೆ ಪ್ರತ್ಯೇಕ್ಷ ಹಾಗೂ ಪರೂಕ್ಷವಾಗಿ ಭಾಗವಹಿಸಿ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೇಗೆ ಸಹಾಯ ಮತ್ತು ಸಹಕಾರ ನೀಡಿದ ಎಲ್ಲಾ ವರ್ಗಕ್ಕೆ ಅವರು ಧನ್ಯವಾದಗಳು ಅರ್ಪಿಸಿದ್ದಾರೆ.ಮತ್ತು ಮುಂದೆಯು ಸಹ ಇಂತಹ ವೇದಿಕೆಯನ್ನು ತಮ್ಮ ಮುಂದಿಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.