
ಬೀದರ:ಸೆ.9: ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಗುರು ನಾನಕ ಶಿಕ್ಷಣ ಸಂಸ್ಥೆ ಮತ್ತು ಶ್ರೀ ನಾನಕ ಝಿರಾ ಸಾಹೇಬ್ ಫೌಂಡೆಷನ್‍ನ ಅಧ್ಯಕ್ಷ ಡಾ|| ಎಸ್. ಬಲಬೀರ ಸಿಂಗ್‍ಗೆ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಜಿನೆಸ್ ಆ್ಯಂಡ್ ರಿಸರ್ಚ್ (ISಃಖ) ಬೆಂಗಳೂರು ಏಜುಕೇಷನ್ ಟ್ರಸ್ಟ್ ವತಿಯಿಂದ ಗುರು ಶ್ರೇಷ್ಠ ಶಿಕ್ಷಣ ಪ್ರವರ್ತಕ ಪ್ರಶಸ್ತಿ 2023 ಬೆಂಗಳೂರಿನಲ್ಲಿ ಸೆಪ್ಟೆಂಬರ್ 7-2023 ರಂದು ಪ್ರದಾನ ಮಾಡಿದೆ.
ಐಎಸ್‍ಬಿಆರ್‍ನ ಬೆಂಗಳೂರು ಎಜುಕೇಷನ್ ಟ್ರಸ್ಟ್‍ನ ಸಂಸ್ಥಾಪನಾ ದಿನವೂ ಆಗಿರುವ ಸೆಪ್ಟೆಂಬರ್ 7 ರಂದು ಬೆಂಗಳೂರಿನಲ್ಲಿ ಐಎಸ್‍ಬಿಆರ್‍ನ ಅಧ್ಯಕ್ಷ ಡಾ|| ಪ್ರಕಾಶ ಕೊಠಾರಿ, ವಿಟಿಯುನ ಉಪಕುಲಪತಿ ಡಾ|| ಎಸ್.ವಿದ್ಯಾಶಂಕರ ಎಪ್.ಐ.ಸಿ.ಸಿ.ಇ. ಅಧ್ಯಕ್ಷ ಉಲ್ಲಾಸ್ ಥಾಮಸ್, ನಿವೃತ್ತ ಐಎಎಸ್ ಕೆ.ಜಯರಾಜ್, ಐಬಿ ನಾಗಪೂರ ನಿರ್ದೇಶಕ ಪ್ರೊ. ದಿನಾರಾಯ ಮೇತ್ರೆ ಹಾಗೂ ಐಎಸ್‍ಬಿಆರ್ ಹಿರಿಯ ನಿರ್ದೇಶಕ ಸಿ.ಮನೋಹರ ಅವರುಗಳು ಇಲ್ಲಿಯ ಗುರು ನಾನಕ ಶಿಕ್ಷಣ ಸಂಸ್ಥೆ ಸಮೂಹಗಳ ಅಧ್ಯಕ್ಷರಾಗಿರುವ ಡಾ|| ಎಸ್.ಬಲಬೀರ್ ಸಿಂಗ್ ಹಾಗೂ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ರೇಷ್ಮಾ ಕೌರ ಅವರಿಗೆ ಗುರು ಶ್ರೇಷ್ಠ ಶಿಕ್ಷಣ ಪ್ರವರ್ತಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗುರು ನಾನಕ ಶಿಕ್ಷಣ ಸಂಸ್ಥೆ ಸಮೂಹಗಳ ಉಪಾಧ್ಯಕ್ಷೆರಾಗಿರುವ ಶ್ರೀಮತಿ ರೇಷ್ಮಾ ಕೌರ್, ಬೀದರ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿದ್ದರೂ ತಮ್ಮ ಶಿಕ್ಷಣ ಸಂಸ್ಥೆಯು ಎಲ್‍ಕೆಜಿ ಯಿಂದ ಹಿಡಿದು ಪದವಿ ಶಿಕ್ಷಣದ ವರೆಗೆ ವಿದ್ಯಾರ್ಥಿಗಳಿಗೆ ಅಧುನಿಕ ಶೈಲಿಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತ ಬರುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗಾಗಿಯೇ ಮೀಸಲಿಟ್ಟಿರುವ ಐಎಸ್‍ಬಿಆರ್ ರವರ ಈ ಪ್ರತಿಷ್ಠಿತ ಪ್ರಶಸ್ತಿಯು ಡಾ|| ಎಸ್. ಬಲಬೀರ ಸಿಂಗ್‍ಗೆ ದೊರಕಿರುವುದು ನಮಗೆ ಮತ್ತಷ್ಟು ಪ್ರೇರಣೆ ಹಾಗೂ ಬಲ ತಂದು ಕೊಟ್ಟಿದೆ. ಇನ್ನು ಮುಂದೆ ನಮ್ಮ ಶಿಕ್ಷಣ ಸಂಸ್ಥೆ ಹಲವಾರು ಅಧುನಿಕ ತಂತ್ರಜ್ಞಾನ ಹಾಗೂ ಡಿಜಿಟಲಿಕರಣ ಅಳವಡಿಸಿಕೊಂಡು ಮಕ್ಕಳಿಗೆ ಮತ್ತಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಇದು ಸಹಕಾರಿಯಾಗಲಿದೆ. ಈಗಾಗಲೆ ಹಲವಾರು ಅಧುನಿಕತೆಗೆ ಹೊಂದಿಕೊಂಡಿರುವ ತಂತ್ರಜ್ಞಾನಗಳನ್ನು ಹಾಗೂ ಡಿಜಿಟಲಿಕರಣ ಸೌಲಭ್ಯಗಳನ್ನು ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿಯೇ ಅಳವಡಿಸಿರುವುದರಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಅನೇಕ ರೀತಿಯ ಸಾಧನೆಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರಮಟ್ಟದಲ್ಲಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.