ಡಾ.ಎಸ್.ಎಸ್.ಪಾಟೀಲ ಪ್ರಥಮ ಪುಣ್ಯಸ್ಮರಣೆ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

ಕಲಬುರಗಿ,ಆ.22-ಎಸ್.ಆರ್.ಪಾಟೀಲ ಫೌಂಡೇಶನ್ ಹಾಗೂ ಪಾಟೀಲ ಗ್ರೂಫ್ ಆಫ್ ಇಂಡಸ್ಟ್ರೀಸ್ ಸಂಯುಕ್ತಾಶ್ರಯದಲ್ಲಿ ಕರ್ಮಯೋಗಿ ದಿ.ಡಾ.ಎಸ್.ಎಸ್.ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.23 ರಂದು ಬೆಳಿಗ್ಗೆ 11.30ಕ್ಕೆ ನಗರದ ಸೂಪರ್ ಮಾರ್ಕೆಟ್‍ನ ಸಂಗ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಡಾ.ಲಿಂಗರಾಜ ಎಸ್.ಪಾಟೀಲ ಹಾಗೂ ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್ ನಿರ್ದೇಶಕ ಸಿದ್ಧಲಿಂಗ ಎಸ್.ಪಾಟೀಲ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅವರು ಸಮಾರಂಭದ ಸಾನಿಧ್ಯವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮಾರಂಭ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಎಸ್.ಆರ್.ಪಾಟೀಲ ಫೌಂಡೇಶನ್‍ನ ಗೌರವ ಅಧ್ಯಕ್ಷರಾದ ಸರೋಜನಿದೇವಿ ಎಸ್.ಪಾಟೀಲ ಅವರು ಉಪಸ್ಥಿತತರಿರಲಿದ್ದು, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ.ಮನು ಬಳಿಗಾರ ಅಧ್ಯಕ್ಷತೆ ವಹಿಸುವರು. ಉದ್ಯಮಿ ರೇವಣಸಿದ್ದಪ್ಪಾ ಜಿ.ಪಾಟೀಲ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಕರ್ಮಯೋಗಿ ಪ್ರಶಸ್ತಿ ಪುರಸ್ಕøತರು
ವಿಜಯಪುರದ ಬಿಎಲ್‍ಡಿಇಎ ಅಧ್ಯಕ್ಷರಾದ ಡಾ.ಎಂ.ಬಿ.ಪಾಟೀಲ (ಶಿಕ್ಷಣ), ಲೋಕಸಭಾ ಮಾಜಿ ಸದಸ್ಯರಾದ ಡಾ.ಬಸವರಾಜ ಪಾಟೀಲ ಸೇಡಂ (ಸಮಾಜ ಸೇವೆ), ಮುಂಬೈನ ಬಜಾಜ್ ಅಥ್ರ್ಸ್ ಪ್ರೈ.ಲಿಮಿಟೆಡ್‍ನ ಶ್ಯಾಮ್ ಬಜಾಜ್ (ಉದ್ಯಮ), ಹೆಸರಾಂತ ಚಿತ್ರಕಲಾವಿದ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ನಾಡೋಜ ಡಾ.ಜೆ.ಎಸ್.ಖಂಡೇರಾವ (ಲಲಿತಕಲೆ), ಲೇಖಕ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಎಚ್.ಟಿ.ಪೋತೆ (ಸಾಹಿತ್ಯ) ಅವರಿಗೆ ಕರ್ಮಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.