ರಾಯಚೂರು.ಏ.೧೨- ನಿನ್ನೆ ಬಿಜೆಪಿ ಪಕ್ಷ ೧೮೯ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ಹಾಲಿ ಶಾಸಕರು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾದ ಡಾ ಎಸ್ ಶಿವರಾಜ ಪಾಟೀಲ್ ಘೋಷಣೆಯಾದ ಕುತೂಹಲದಲ್ಲಿ ಇಂದು ಮುಂಜಾನೆ ಜಿಲ್ಲೆಯ ಆರಾಧ್ಯ ದೈವವಾದ
ದೇವಸುಗೂರು ಸೂಗುರೇಶ್ವರ ದರ್ಶನ ಪಡೆದು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೧೫ ವಾರ್ಡ್ ನಂಬರ್ ೨೬ ರಲ್ಲಿ ಇಂದು ಮುಂಜಾನೆಯಿಂದ ಮನೆ ಮನೆಗೆ ಭೇಟಿ ನೀಡಿ ಬಿಜೆಪಿಗೆ ಪಕ್ಷಕ್ಕೆ ಮತ ನೀಡಿ, ನೀಡುವಂತೆ ಪ್ರಚಾರ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದರು.