ಕಲಬುರಗಿ,ಜೂ.26: ವಿಜಯಪುರದಲ್ಲಿ ಜುಲೈ 29 ಮತ್ತು 30 ರಂದು ನಡೆಯಲಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಎಚ್.ಟಿ. ಪೋತೆಯವರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಪತ್ರಿಕೋದ್ಯಮ ವಿಭಾಗದ ಅತಿಥಿ ಪ್ರಾಧ್ಯಾಪಕ ಡಾ.ಅಶೋಕ ದೊಡ್ಮನಿ ಅವರು ಸನ್ಮಾನಿಸಿದರು.
ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಡಾ. ಎಚ್.ಟಿ.ಪೋತೆ ನಾಡಿನ ಪ್ರಮುಖ ಕಥೆಗಾರ, ಅನುವಾದಕ, ಸಂಶೋಧಕ, ಜಾನಪದ ವಿದ್ವಾಂಸ, ಕಾದಂಬರಿಕಾರ, ವಿಮರ್ಶಕ ಮತ್ತು ಸಂಸ್ಕøತಿ ಚಿಂತಕರು. ದಲಿತ ಬಂಡಾಯ ಸಾಹಿತ್ಯಕ್ಕೆ ಪೋತೆಯವರ ಕೊಡುಗೆ ಗಮನಾರ್ಹ. ಸುಮಾರು 100 ಕ್ಕಿಂತ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಇವರು
ಕಥೆ, ಕಾದಂಬರಿ, ಪ್ರಬಂಧ,ಸಂಶೋಧನೆ, ಅನುವಾದ, ವಿಚಾರ,ವಿಮರ್ಶೆ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.