ಡಾ. ಎಚ್. ಎಸ್ ಜಂಗೆಗೆ ವಿಶ್ರಾಂತ ಕುಲಪತಿಯಿಂದ ಸನ್ಮಾನ

ಕಲಬುರಗಿ:ಫೆ.9 : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್. ಜಂಗೆ ಅವರು ಶ್ರೀಲಂಕಾದ ಸಬ್ರಗಮ್ ವಿಶ್ವವಿದ್ಯಾಲಯದಲ್ಲಿ ನಡೆದ
“ಪ್ರಥಮ ಕ್ರೀಡಾ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ” ಸಂಪನ್ಮೂಲ ವ್ಯಕ್ತಿ ಆಗಿ ಭಾಗವಹಿಸಿ ಪ್ರಬಂಧ ಮಂಡನೆ ಮಾಡಿದ್ದಕ್ಕಾಗಿ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 44 ನೇ ಸಂಸ್ಥಾಪನೆ ದಿನದ ಕಾರ್ಯಕ್ರಮದಲ್ಲಿ ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪೆÇ್ರ, ಎಂ. ಮುನಿಯಮ್ಮ ಅವರು ಸನ್ಮಾನಿಸಿದರು. ಕುಲಪತಿ ಪೆÇ್ರ, ದಯಾನಂದ ಅಗಸರ್, ಕುಲಸಚಿವ ಡಾ. ಬಿ ಶರಣಪ್ಪ, ವಿತ್ತಾಧಿಕಾರಿ ಪೆÇ್ರ, ಲಕ್ಷ್ಮಣ ರಾಜನಳ್ಕರ್, ಇತರರು ಹಾಜರಿದ್ದರು.