ಡಾ. ಎಂ ಟಿ ದೇವೇಂದ್ರಪ್ಪ ನಿಧನಕ್ಕೆ ಸಂತಾಪ

ದಾವಣಗೆರೆ.ಏ.೨೯; ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೈದ್ಯರಾಗಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಎಂ ಟಿ ದೇವೇಂದ್ರಪ್ಪ  ಹಿಮೋಫೀಲಿಯಾ ಸೊಸೈಟಿಯ ಸ್ವಯಂ ಕಾರ್ಯಕರ್ತರಾಗಿ ಹಿಮೋಫೀಲಿಯಾ ರೋಗಿಗಳ ಚಿಕಿತ್ಸೆಯಲ್ಲಿ ಹಲವು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.  ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಲೈಫ್ ಲೈನ್ ರಕ್ತ ಭಂಡಾರದ ಅಧಿಕಾರಿಯಾಗಿ, ರಾಜ್ಯದ ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿಯ ವೈದ್ಯರು ಮತ್ತು ಶುಶ್ರೂಕಿಯರಿಗೆ ಹಿಮೋಫೀಲಿಯಾ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನ ಬಗೆಗೆ ತರಬೇತಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.   ಇವರ ನಿಧನಕ್ಕೆ ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ, ಅಧ್ಯಕ್ಷರಾದ ಡಾ. ಸುರೇಶ ಹನಗವಾಡಿ, ಉಪಾಧ್ಯಕ್ಷರಾದ ಡಾ. ಬಿ ಟಿ ಅಚ್ಯುತ, ಸಂಜೀವ ಹೆಗಡೆ, ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಮೀರಾ ಹನಗವಾಡಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸದಾಶಿವಪ್ಪ ಮತ್ತು ಸಿಬ್ಬಂದಿ ವರ್ಗದವರು ಕರ್ನಾಟಕ ಹಿಮೋಫೀಲಿಯಾ ಸೊಸೈಟಿ, ಲೈಫ್ ಲೈನ್ ರಕ್ತ ಭಂಡಾರ, ದಾವಣಗೆರೆ ಸಂತಾಪ ಸೂಚಿಸಿದ್ದಾರೆ