ಡಾ.ಎಂ.ಐ.ಸವದತ್ತಿ ಶ್ರೇಷ್ಠ ವಿಜ್ಞಾನಿಗಳಾಗಿದ್ದರು

ಧಾರವಾಡ,ಮಾ3: ಡಾ. ಎಂ.ಐ. ಸವದತ್ತಿ ಈ ನಾಡಿನಒಬ್ಬ ಹೆಸರಾಂತ ವಿಜ್ಞಾನಿಯಾಗಿ ವೈಜ್ಞಾನಿಕ ಚಿಂತನೆಗಳಿಂದಲೇ ಬದುಕಿದವರಾಗಿದ್ದರುಎಂದು ಕ.ವಿ.ವಿ. ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ‘ದಿ.ಪ್ರೊ.ಎಂ.ಆಯ್. ಸವದತ್ತಿದತ್ತಿಉಪನ್ಯಾಸ ಮತ್ತುರಾಷ್ಟ್ರೀಯ ವಿಜ್ಞಾನ ದಿನಾಚರಣೆ` ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಾ.ಎಂ.ಆಯ್. ಸವದತ್ತಿಒಬ್ಬ ಬಹುಮುಖ ವ್ಯಕ್ತಿತ್ವವುಳ್ಳ ಶ್ರೇಷ್ಠ ವಿಜ್ಞಾನಿಗಳಾಗಿದ್ದರು.ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿಅವರುತೋರುತ್ತಿದ್ದಜಾಣ್ಮೆಅನನ್ಯವಾಗಿತ್ತು.ಡಾ. ಎಂ.ಐ. ಸವದತ್ತಿಯವರನ್ನು ಸ್ಮರಿಸಿದರೆ ಸಾಕು ಎಂತಹ ಸಮಸ್ಯೆಗಳನ್ನು ನಿರರ್ಗಳವಾಗಿ ಬಗೆಹರಿಸಬಹುದು.ಅವರುತಮ್ಮ ಸಮಕಾಲಿನವರಿಗೆ ನೀಡುವ ಮಾರ್ಗದರ್ಶನಕಿರಿಯರನ್ನು ಪ್ರೇರೆಪಿಸುವ ರೀತಿಅದ್ಭುತಎಂದು ಹೇಳಿದರು.
ಅತಿಥಿಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡದಕರ್ನಾಟಕಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಹಾಗೂ ವಿಜ್ಞಾನಿ ಪ್ರೊ.ಎಸ್.ಎಂ.ಶಿವಪ್ರಸಾದ ಉಪನ್ಯಾಸ ನೀಡಿ ಮಾತನಾಡುತ್ತಾ, ಧಾರವಾಡತಂತ್ರಜ್ಞಾನ ಹಾಗೂ ಮಾಹಿತಿತಂತ್ರಜ್ಞಾನಕ್ಷೇತ್ರದಲ್ಲಿದಾಪುಗಾಲುಇಡುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರೆಅವರಲ್ಲಿ ಸಹಜವಾಗಿಕುತೂಹಲ, ಕಲ್ಪನಾ ಶಕ್ತಿ ಹೆಚ್ಚಿ ಸಾಧಕರಾಗಲು ಸಾಧ್ಯವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಒಂದು ಒಳ್ಳೆ ಪರಿಣಾಮವನ್ನು ನಿರೀಕ್ಷಿಸಬಹುದೆಂದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಎಸ್. ಮೂರ್ತಿ ಮಾತನಾಡಿ, ಇಂದು ವಿದ್ಯಾ ಸಂಸ್ಥೆಗಳು ಜ್ಞಾನದಜೊತೆಗೆ ವಿಜ್ಞಾನವನ್ನು ವಿಜ್ಞಾನದಜೊತೆಗೆ ಮಾನವಿಯತೆಯನ್ನು ಕಲಿಸುವ ಅಗತ್ಯವಿದೆ. ವಿಜ್ಞಾನದ ಒಳಿತು ಹಾಗೂ ಕೆಡಕುಗಳನ್ನು ಮಕ್ಕಳು ಪರಾಮರ್ಶಿಸಬೇಕಿದೆ. ಮಾನವೀಯತೆಇಲ್ಲದ ವಿಜ್ಞಾನಅರ್ಥಹೀನಎಂದು ಹೇಳಿದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ದತ್ತಿ ದಾನಿಗಳ ಪರವಾಗಿ ಶ್ರೀಮತಿ ಸುಮಿತ್ರಾ ಎಂ. ಸವದತ್ತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಡಾ.ಎಸ್.ಬಿ. ಹೊಸಮನಿಯವರು ಪ್ರೊ. ಎಂ.ಐ ಸವದತ್ತಿಯವರಜೊತೆಗಿನತಮ್ಮಒಡನಾಟವನ್ನು ಹಂಚಿಕೊಂಡರು.
ಶ್ರೀಮತಿ ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಗುರು ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶ್ರೀಧರ ನಾಡಿಗೇರ, ಮಲ್ಲಿಕಾರ್ಜುನ ಅಳಗವಾಡಿ, ಡಾ.ಪಾಂಡುರಂಗ, ಪ್ರೊ.ಎಸ್.ಎಲ್. ಸಂಗಮ, ಡಿ.ಬಿ. ನೆರ್ಲಿ, ಕೃಷ್ಣಾರೆಡ್ಡಿ, ಪ್ರೊ.ಎಸ್.ವ್ಹಿ. ಅಯ್ಯನಗೌಡರ, ಪ್ರಭು ಸಂಕನಗೌಡರ, ಪ್ರೊ. ವ್ಹಿ.ಸಿ. ಸವದಿ, ನಿಂಗಣ್ಣಕುಂಟಿ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ,ಚಂದ್ರಶೇಖರಅಮೀನಗಡ, ಎಂ.ಎಂ.ಚಿಕ್ಕಮಠ, ಹರ್ಷವರ್ಧನ ಶೀಲವಂತರ, ಯು.ಬಿ. ಬೆಳ್ಳಕ್ಕಿ, ಪ್ರೊ. ಬುಜರ್ಕಿ, ನವಲಗುಂದಅಡ್ವೋಕೇಟ್, ಅಶೋಕ ನಿಡವಣಿ, ನಾಗರಾಜಯಲಿಗಾರ, ಶಂಕರ ಬೆಟಗೇರಿ, ಶಂಕರಲಿಂಗ ಶಿವಳ್ಳಿ, ರಾಜೇಂದ್ರ ಸಾವಳಗಿ, ಸುರೇಶ ಸಾವಳಗಿ, ಶಂಕರ ಸಣಕಲ್, ಕೆ.ಜಿ. ದೇವರಮನಿ ಭಾಗವಹಿಸಿದ್ದರು.