ಡಾ|| ಎಂ.ಎಸ್.ಸ್ವಾಮಿನಾಥನ್‍ರವರಿಗೆ ರೈತರ ಸಂಘದಿಂದ  ಬಾವಪೂರ್ಣ ಶ್ರದ್ಧಾಂಜಲಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ11: ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಘಟಕದಿಂದ ಡಾ.ಎಂ.ಎಸ್.ಸ್ವಾಮಿನಾಥನ್ ಹಾಗೂ ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಕ್ಕಡಕೇರಿಯ ರೈತ ಕುಟುಂಬಕ್ಕೆ ಬಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಜೆ.ಕಾರ್ತಿಕ್ ರಾಜ್ಯ ಕಾರ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಇವರು ಮಾತನಾಡಿ ಡಾ|| ಎಂ.ಎಸ್.ಸ್ವಾಮಿನಾಥನ್‍ರವರು ತಮಿಳುನಾಡಿನ ಕುಂಬಕೋಣದಲ್ಲಿ 1925ರಲ್ಲಿ ಜನಿಸಿ, 1943ರಲ್ಲಿ ವೈಧ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿದ್ದರು. 1943ರಲ್ಲಿ ಬಂಗಾಳದಲ್ಲಿ ಸುಮಾರು 30 ಲಕ್ಷ ಜನರು (ಕ್ಷಾಮ) ಹಸಿವಿನಿಂದ ಸತ್ತರು. ಈ ಒಂದು ಘಟನೆ ಅವರ ಮನಸ್ಸನ್ನು ಬದಲಾಯಿಸಿತು. ಕೃಷಿ ಸಂಶೋದನೆ ತೆಗೆದುಕೊಳ್ಳುವಂತೆ ಮಾಡಿದ್ದು ಇದು ನಿಜವಾದ ಸಮಾಜಮುಖಿ ಚಿಂತನೆ ಎಂದರು.
1961ರಲ್ಲಿ ದೇಶದಲ್ಲಿ ಆಹಾರ ಅಭದ್ರತೆ ಇತ್ತು, ಆಗ ಭತ್ತ, ಗೋದಿ, ಹತ್ತಿ, ಮುಂತಾದ ಬೆಳೆಗಳನ್ನು ಅಭಿವೃದ್ಧಿ ಪಡಿಸಿದರು. ಆಗ ದೇಶದಲ್ಲಿ 12 ಮಿಲಿಯನ್‍ಟನ್ ಗೋದಿ ಬೆಳೆಯುತ್ತಿದ್ದರು. 10ವರ್ಷಗಳಲ್ಲಿ ಸುಮಾರು 70 ಮಿಲಿಯನ್‍ಟನ್ ಗೋದಿ ಬೆಳೆಯುವ ಹಾಗೆ ಮಾಡಿದರು. ಇದಕ್ಕಾಗಿ ಸ್ವಾಮಿನಾಥನ್‍ರವರನ್ನು ಹಸಿರು ಕ್ರಾಂತಿಯ ಪಿತಾಮಹಾ ಎಂದು ಕರೆಯಲಾಗಿದೆ ಇಂತಹ ವ್ಯಕ್ತಿಯನ್ನು ಕಳೆದುಕೊಂಡ ನಮಗೆ ದುಖವಾಗಿದೆ ಎಂದು ಇನ್ನು ಅವರ ಕುಟುಂಬಕ್ಕೆ ಆದ ನಷ್ಟ ಹೇಳತಿರದು ಎಂದರು. ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷರಾಗಿ, ರೈತರು ಬೆಳೆದಂತಹ ಬೆಳೆಗಲಿಗೆ 2ಪಟ್ಟು ಬೆಂಬಲ ಬೆಲೆ ನೀಡಬೇಕೆಂದು ಪ್ರತಿಪಾಧಿಸುತ್ತಿದ್ದರು ಎಂದರು.
ಇದೆ ಸಂದರ್ಭದಲ್ಲಿ ಮೊನ್ನೆ ನಡೆದ ರಸ್ತೆ ಅಪಘಾತದಲ್ಲಿ ಒಂದೆ ಬಾರಿಗೆ ಅಸುನೀಗಿದ 7 ಜನರಿಗೂ ಶ್ರದ್ಧಾಂಜಲಿ ಅರ್ಪಸಿದರು. ಜಿಲ್ಲಾಧ್ಯಕ್ಷರಾದ ಜೆ.ಎನ್.ಕಾಳಿದಾಸ್, ಹೆಚ್.ಜಿ.ಮಲ್ಲಿಕಾರ್ಜುನ ಅಧ್ಯಕ್ಷರು ಹೊಸಪೇಟೆ ತಾ||, ಹನುಮಂತಪ್ಪ ನಲ್ಲಾಪುರ ಗೌರವಾದ್ಯಕ್ಷರು, ಹುಲುಗಪ್ಪ ಹೊಸಪೇಟೆ ನಗರ ಘಟಕ ಅಧ್ಯಕ್ಷರು, ಹೇಮರೆಡ್ಡಿ ಜಿಲ್ಲಾ ಸಂಚಾಲಕರು, ಜೆ.ನಾಗರಾಜ್ ಜಿಲ್ಲಾ ಉಪಾಧ್ಯಕ್ಷರು, ಎಲ್.ಎಸ್.ರುದ್ರಪ್ಪ ಉಪಾಧ್ಯಕ್ಷರು ಹೊಸಪೇಟೆ, ಮಂಜುನಾಥ ಕಮಲಾಪುರದ ಅಧ್ಯಕ್ಷರು, ಮಂಜುನಾಥ ಸಂಕ್ಲಾಪುರ ಅಧ್ಯಕ್ಷರು, ಹುಲುಗಪ್ಪ, ಅರ್ಜುನಪ್ಪ, ನಾಗರಾಜ.ಹೆಚ್., ಹನುಮಂತ, ರುದ್ರಪ್ಪ, ಜೆ.ಮಲ್ಲಪ್ಪ ಹಾಗೂ ಇನ್ನಿತರ ರೈತ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದರು.