ಡಾ. ಎಂ.ಎಂ. ಕಲಬುರಗಿ ವೈಚಾರಿಕಾ ಸಂಶೋಧಕರು : ಡಾ. ಬಲ್ಲೂರ

ಬೀದರ:ಆ.31:ವೈಚಾರಿಕ ಚಿಂತಕ, ಏಕೋಭಾವ, ಅಪರೂಪದ ಸಾಹಿತಿ, ವಚನ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿ ವಚನಗಳು ಪರಿಷ್ಕರಣೆ ಮಾಡಿದ ಎಮ್.ಎಮ್. ಕಲಬುರಗಿ ರವರು ಹಂತಕರ ಗುಂಡಿಗೆ ಬಲಿಯಾಗಿದ್ದು, ಅತ್ಯಂತ ನವೀನ ಸಂಗತಿ ಎಂದು ಡಾ. ಬಸವರಾಜ ಬಲ್ಲೂರ ನುಡಿದರು.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಸವಕೇಂದ್ರ ಜಂಟಿ ಸಂಯೋಗದಲ್ಲಿ ಹಮ್ಮಿಕೊಂಡ ಎಮ್.ಎಮ್. ಕಲಬುರಗಿ ಸ್ಮರಣೋತ್ಸವನ್ನು ಅವರ ಭಾವಚಿತ್ರಕ್ಕೆ ಪೂಜ್ಯರಾದ ಪಂಚಯ್ಯ ಸ್ವಾಮಿಗಳು ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ|| ಬಸವರಾಜ ಬಲ್ಲೂರು ಮುಖ್ಯ ಅತಿಥಿಗಳಾಗಿ ಡಾ|| ಎಮ್.ಎಮ್. ಕಲಬುರಗಿ ರವರ 100 ಕೃತಿಗಳಲ್ಲಿ ಶೇಕಡ 75 ಕೃತಿಗಳು ವೈಚಾರಿಕಾ ಸಂಶೋಧನೆಗಳಿರುವುದು ಅಭಿಮಾನದ ಸಂಗತಿ ಚಾರವಾಕರಿಂದ ಗೌರಿ ಲಂಕೇಶ ರವರಿಗೆ ಹತ್ಯೆಯಾಗಿರುವುದು ಸತ್ಯ ಪ್ರತಿಪಾದನೆ ಮಾಡಿರುವುದಕ್ಕಾಗಿ ಮಾತ್ರ.
ಭವಿ ಭಕ್ತವೆಂಬ ವಿಚಾರವನ್ನು ಅತ್ಯಂತ ಸರಳವಾಗಿ ಪ್ರತಿಬಿಂಬಿಸಿದಾರೆ. ಏಕದಳ-ದ್ವಿದಳಧಾನ್ಯ ಭೂಮಿ ಮೇಲೆ ಬಿತ್ತಿದಾಗ ಅದರ ಕವಚ ಹೋಗಿ ಸಸ್ಯ ಬೆಳೆಯುತ್ತಿದೆ. ಅದರಂತೆ ಮಾನವನಲ್ಲಿಯ ಭವಿವೆಂಬ ಕವಚ ಕಳಚಿದಾಗ ಭಕ್ತನಾಗಬಹುದಾಗಿದೆ. ಅಂಗ-ಲಿಂಗಕ್ಕೆ ಕೇವಲ ಅನಲ್ಲಿಯ ಅಡ್ಡಗೇರೆ, ಅದನ್ನು ಅಳಸಿದಾಗ ಅಂಗ ಲಿಂಗವಾಗಲು ಸಾಧ್ಯ. ಹುಟ್ಟಿದಾಗ ವಿಶ್ವಮಾನವ ಬೆಳೆದಾಗ ಅಲ್ಪ ಮಾನವ ಅರಿವಾದಾಗ ಮಹಾಮಾನವನಾಗಬಹುದು. ನಮ್ಮಲ್ಲಿಯ ನಡಾವಳಿಕೆಗಳ ವ್ಯಕ್ತಿತ್ವದ ವಿಕಸನಕ್ಕೆ ಪ್ರಮುಖ ದಾರಿ ವ್ಯಕ್ತಿ ಸಾಯಬಹುದು. ಗಾಧಿಜಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಸತ್ಯ, ಅಹಿಂಸೆ, ಹೋರಾಟ ಅಚ್ಚಳಿಯದೆ ಉಳಿದಿದೆ. ಹಾಗೆಯೇ ಎಮ್.ಎಮ್. ಕಲಬುರಗಿ ರವರ ಹತ್ಯೆಯಾದರು ಅವರ ತತ್ತ್ವ ಸಿದ್ಧಾಂತ ಯಾರಿಂದಲೂ ಮರೆ ಮಾಚಲು ಸಾಧ್ಯವಿಲ್ಲ. ಹೀಗಾಗಿ ಅವರು ನಮ್ಮೊಂದಿಗೆ ಇನ್ನೂ ಜೀವಂತವಾಗಿದ್ದಾರೆಂದು ತಮ್ಮ ನಿಲುವು ಪ್ರತಿಪಾದಿಸಿದರು.
ಮಹಿಳಾ ಹಿರಿಯ ಸಾಹಿತಿ ಭಾರತಿ ವಸ್ತ್ರದ ಮುಖ್ಯ ಅತಿಥಿಗಳಾಗಿ ಎಮ್.ಎಮ್. ಕಲಬುರಗಿ ರವರ ಅಪರೂಪದ ಅಣ್ಣ ಅವರೆಲ್ಲರ ವಚನ ಸಾಹಿತ್ಯ ಬಡವಾಗಿದೆ ಎಮ್.ಎಮ್. ಕಲಬುರಗಿರವರು ಅಪ್ರಿಯವಾದ ಪರಿಣಾಮಗಳನ್ನು ತಮ್ಮ ಜೀವನುದ್ದಕ್ಕೂ ಎದುರಿಸಬೇಕಾಯಿತು. ಯಾವ ಬೆದರಿಕೆಗೂ ಒತ್ತಡಕ್ಕೂ ಜಗ್ಗದೆ ತಮ್ಮ ಬದ್ಧತೆಯನ್ನು ನಿಭಾಯಿಸುವ ಛಲವಂತರಾದರಿಂದಲೇ ಪ್ರಾಣ ತೆರಬೇಕಾಯಿತೆಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರವಚನಕಾರ್ಯರಾದ ಪೂಜ್ಯ ಶ್ರೀ ಬಸವಗೀತಾ ತಾಯಿಯವರು ಸಾನಿತ್ಯವಹಿಸಿ ಶರಣರಿಗೆ ಸಾವಿಲ್ಲ. ಶರಣರು ಸಾವಿಗಜ್ಜುವವರಲ್ಲ. ಮರಣವೆ ಮಹಾನವಮಿ ಎಂಬ ತತ್ತ್ವ ಸಿದ್ಧಾಂತದ ಅಡಿಯಲ್ಲಿ ಬದುಕಿ ಬಾಳಿದ ಶ್ರೇಷ್ಠರು ಎಮ್.ಎಮ್. ಕಲಬುರಗಿ ರವರು.
ಸಮಾರಂಭದ ಘನ ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷರಾದ ಶರಣಪ್ಪ ಮೀಠಾರೆ ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಆಶೆಯ ಮಾತನಾಡಿ ಕನ್ನಡ ಪ್ರಜ್ಞೆ ಅರಳಿಸುವುದರ ಜೊತೆಗೆ ವಚನ ಸಂಸ್ಕøತಿಯನ್ನು ಮನ-ಮನಕ್ಕೆ ಮುಟ್ಟಿಸುವ ಸದಾಶಯದ ಸಂಪನ್ಮೂಲಿಗರೂ ಇವರಾಗಿದ್ದರು. ಕನ್ನಡ ಇಂದು ಮಲ ಮಗನಾಗಿ ಕನ್ನಡಿಗರೂ ಎರಡನೆ ದರ್ಜೆ ಪ್ರಜೆಗಳಾಗುತ್ತಿರುವುದು ಒಂದು ಸಮಾರಂಭದಲ್ಲಿ ಮರುಗಿರುವುದನ್ನು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ಅನುದಾನ ರಹಿತ, ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗದ ಅಧ್ಯಕ್ಷರಾಗಿ ಆಯ್ಕೆಯಾದ ರಾಜೇಂದ್ರಕುಮಾರ ಮಣಿಗೇರೆ ಹಾಗೂ ಧರ್ಮಸ್ಥಳದ ಮಂಜುನಾಥೇಶ್ವರ ಯೋಜನೆಯ ಜನಜಾಗೃತಿ ವೇದಿಕೆಯ ಜಿಲ್ಲಾ ಕೇಂದ್ರದ ಅಧ್ಯಕ್ಷರಾಗಿ ನೇಮಕಗೊಂಡ ವಿರೂಪಾಕ್ಷ ಗಾದಗಿಯವರಿಗೆ ಗೌರವಿಸಲಾಯಿತು. ಶಿವಶಂಕರ ಟೋಕರೆ ನಿರೂಪಿಸಿದರೆ, ರೇವಣಪ್ಪ ಮೂಲಗೆ ವಂದಿಸಿದರು. ಪ್ರೊ. ವಿದ್ಯಾವತಿ ಬಲ್ಲೂರ ವಚನ ಪ್ರಾರ್ಥನೆ ನಡೆಸಿಕೊಟ್ಟರು.