ಡಾ. ಅಷ್ಟೂರ್ ದಂಪತಿಗಳಿಗೆ ಅಭಿನಂದನೆ ಮಹಾಪೂರ

ಬೀದರ್:ಎ.3: ಇಲ್ಲಿಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಡಾ. ಬಸವರಾಜ ಪಾಟೀಲ ಅಷ್ಟೂರ ಅವರ ಅಭಿನಂದನಾ ಸಮಾರಂಭ ನಡೆಯಿತು.

ಪಾಟೀಲರು ವೈದ್ಯರಾದರೂ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾರೆ. 30 ವರ್ಷ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅನೇಕರು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಎಸ್.ಜಿ. ಪಾಟೀಲ, ಪ್ರೊ. ದೇವೇಂದ್ರ ಕಮಲ್, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಬಾಬುರಾವ್ ದಾನಿ, ಡಾ. ಮಲ್ಲಿಕಾರ್ಜುನ ಕನಶೆಟ್ಟಿ, ಪ್ರೊ. ಆನಿಲಕುಮಾರ ಆಣದೂರೆ, ಲತಾ, ಡಾ. ಎಸ್.ಕೆ. ಸಾತನೂರ, ಉಮಾ ಪಾಟೀಲ ಇದ್ದರು.
ಉಪ ಪ್ರಾಚಾರ್ಯ ಡಾ. ಎಸ್.ಬಿ. ಗಾಮಾ ಸ್ವಾಗತಿಸಿದರು. ಶೈಲಜಾ ಸಿದ್ಧವೀರ ನಿರೂಪಿಸಿದರು. ಡಾ. ದೀಪಾ ರಾಗಾ ವಂದಿಸಿದರು.