ಡಾ.ಅಶ್ವಥ್ ಹುಟ್ಟುಹಬ್ಬ ಆಚರಣೆ

ಕೋಲಾರ,ಡಿ.೩೦: ಡಾ.ಅಶ್ವಥ್ ಅಭಿಮಾನಿ ಬಳಗ ಹಾಗೂ ಸ್ವಂದನ ಗ್ರೂಪ್ ವತಿಯಿಂದ ಕಂಚಿನ ಕಂಠದ ಡಾ.ಅಶ್ವಥ್ ಅವರ ೮೧ ನೇ ವರ್ಷದ ಹುಟ್ಟು ಹಬ್ಬ ಮತ್ತು ೧೧ ನೇ ವರ್ಷದ ಪುಣ್ಯತಿಥಿ ಅಂಗವಾಗಿ, ಕೆ,ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ ಅವರ ಭಾವಚಿತ್ರವನ್ನು ಇಟ್ಟು ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅದ್ಯಕ್ಷ ಕೆ.ಎಸ್.ಗಣೇಶ್, ಕಸಾಪ ಜಿಲ್ಲಾಧ್ಯಕ್ಷ ನಾಗನಂದ ಕೆಂಪರಾಜ್, ಯು.ಪಿ.ಸೋಮಶೇಖರ್ ಹಾಗೂ ಡಾ.ಅಶ್ವಥ್‌ಅಭಿಮಾನಿ ಬಳಗ ಅಧ್ಯಕ್ಷ ಸ್ಪಂದನರಂಗನಾಥ್, ಬಿ.ಎಮ್. ಸುಬ್ರಮಣಿ, ಮತ್ತು ಯಶವಂತ್ ಈ ಉಪಸ್ಥಿತರಿದ್ದರು.