ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‌ಎಸಿಸಿ ಪದವಿ ಪ್ರದಾನ

ಮಂಗಳೂರು, ಜೂ.೧೦- ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದಯ ತಜ್ಞ ಆಗಿರುವ ಡಾ| ಅಬ್ದುಲ್ ರಝಾಕ್ ಯು.ಕೆ ಇವರ ಅನುಪಮ ವೈದ್ಯಕೀಯ ಸೇವಾಕಾರ್ಯ ಗುರುತಿಸಿ ಅಮೇರಿಕಾ ರಾಷ್ಟ್ರದ ಪ್ರತಿಷ್ಠಿತ ವೈದಕೀಯ ಸಂಸ್ಥೆಯಾದ ಅಮೇರಿಕನ್ ಕಾಲೇಜ್ ಅಫ್ ಕಾರ್ಡಿಯಾಲೊಜಿ ಎಫ್‌ಎಸಿಸಿ ಪದವಿ ಪ್ರದಾನಿಸಿ ಗೌರವಿಸಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕು ಮಜೂರು ನಿವಾಸಿ ಆಗಿರುವ ಡಾ| ಅಬ್ದುಲ್ ರಝಾಕ್ ಕಾಪು ಕರಂಧಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢ ವಿದ್ಯಾಭ್ಯಾಸ ಪೂರೈಸಿದ್ದು. ಪ್ರಸ್ತುತ ಉಡುಪಿ ಪರ್ಕಳದಲ್ಲಿ ವಾಸಿಸುತ್ತಿದ್ದು ಹಾಜಿ ಬಾವು ಬ್ಯಾರಿ ಮತ್ತು ನಬೀಸಾಬಿ ದಂಪತಿಯ ಸುಪುತ್ರ ಮತ್ತು ಹೆಸರಾಂತ ಸಮಾಜ ಸೇವಕ ಪರ್ಕಳ ಹಾಜಿ ಕೆ.ಅಬೂಬಕ್ಕರ್ ಇವರ ಅಳಿಯ ಆಗಿದ್ದಾರೆ.