ಡಾ. ಅಪ್ಪಾ ಶತಾಯುಷಿಯಾಗಲೆಂದು ದೀಡ್ ನಮಸ್ಕಾರ

ಕಲಬುರಗಿ:ನ.14: ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದಲ್ಲಿ 8ನೇ ಮಹಾದಾಸೋಹಿ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವ ವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರ 87ನೇ ಜನ್ಮದಿನದ ಅಂಗವಾಗಿ ಕನ್ನಡ ಸೈನ್ಯದಿಂದ ಶತಾಯುಷಿ ಆಗಲೆಂದು ಪ್ರಾರ್ಥಿಸಿ 101 ತೆಂಗಿನಕಾಯಿ ಹರಕೆ ಹಾಗೂ ದೀಡ್ ನಮಸ್ಕಾರವನ್ನು ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಸೋಮನಾಥ್ ಎಲ್. ಕಟ್ಟಿಮನಿ ಅವರು ಹಾಕಿದರು.
ಈ ಸಂದರ್ಭದಲ್ಲಿ ಸೋಮನಾಥ್ ಕಟ್ಟಿಮನಿ ಅವರು ಮಾತನಾಡಿ, ಡಾ. ಶರಣಬಸವಪ್ಪ ಅಪ್ಪಾ ಅವರು ಧಾರ್ಮಿಕ ಹಾಗೂ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.
ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದ್ದಲ್ಲದೇ ಒಂದು ಪ್ರತ್ಯೇಕ ಶರಣಬಸವ ವಿಶ್ವವಿದ್ಯಾಲಯವನ್ನೂ ಆರಂಭಿಸಿದರು. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಡಾ. ಅಪ್ಪಾ ಅವರ ಕೊಡುಗೆ ಸ್ಮರಣೀಯವಾಗಿದೆ. ಅವರಿಗೆ ಶರಣಬಸವೇಶ್ವರರು ನೂರು ವರ್ಷಗಳ ಆಯುಷ್ಯ ಕೊಡಲಿ ಎಂದು ಅವರು ಪ್ರಾರ್ಥಿಸಿಸಿದರು.
ಈ ಸಂದರ್ಭದಲ್ಲಿ ಶರಣಬಸವೇಶ್ವರ್ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ್ ದೇಶಮುಖ್, ಪದಾಧಿಕಾರಿಗಳಾದ ಶಂಕರ್ ತಾಳಿಕೋಟಿ, ನಾಗರಾಜ್ ಕಟ್ಟಿಮನಿ, ರಾಜಕುಮಾರ್, ನಾಗೀಂದ್ರಪ್ಪ ಹಾಗರಗಿ, ಸಂತೋಷ್ ಹಾಗರಗುಂಡಗಿ, ಕವಿರಾಜ್ ಕೋರಿ, ಶರಣು ಗೋಳಾ, ವಿಶ್ವನಾಥ್, ಗಿರೀಶ್ ಪಾಟೀಲ್, ಸುರೇಶ್ ಗೋಳಾ, ಮಹೇಂದ್ರ ಗೋಳಾ, ಬಸವರಾಜ್ ಕಟ್ಟಿಮನಿ, ಶ್ರೀಧರ್ ಕಟ್ಟಿಮನಿ, ಅಕ್ಷಯ್ ಕಟ್ಟಿಮನಿ, ಮೋಹನರಾಜ್, ಶರಣು ಹಾಗರಗಿ, ರಾಹುಲ್ ಕಟ್ಟಮನಿ, ತರುಣ್ ಹರಳಯ್ಯ, ರಾಜಕುಮಾರ್ ಗುತ್ತೇದಾರ್ ಮುಂತಾದವರು ಉಪಸ್ಥಿತರಿದ್ದರು.