ಡಾ. ಅಜಯ ಸಿಂಗ್ ಅವರಿಗೆ ದಕ್ಷಿಣ ಕನ್ನಡ ಸಂಘದಿಂದ ಸನ್ಮಾನ

ಕಲಬುರಗಿ:ಆ.24:ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಅಜಯ್ ಸಿಂಗ್ ಅವರಿಗೆ ದಕ್ಷಿಣ ಕನ್ನಡ ಸಂಘದಿಂದ ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು.

     ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಅವರ ನೇತೃತ್ವದಲ್ಲಿ ಆಗಸ್ಟ್ 22ರಂದು ಭೇಟಿ ಮಾಡಿ ಕರಾವಳಿಯ ಯಕ್ಷಗಾನದ ಸ್ಮರಣಿಕೆ , ಶಾಲು  ಹಾಗೂ ಹಾರದೊಂದಿಗೆ ಸನ್ಮಾನ ನೆರವೇರಿಸಲಾಯಿತು . 
     ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಘದ  ಈ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಕಲಬುರ್ಗಿಯ  ಸಾರ್ವಜನಿಕ ಉದ್ಯಾನವನದ ಶ್ರೀ ಯಾತ್ರಿ ನಿವಾಸ ಸಭಾಂಗಣದಲ್ಲಿ ನಡೆಯುವ ಸಂದರ್ಭದಲ್ಲಿ ಸಾಯಂಕಾಲದ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಬಹುಮಾನ ವಿತರಿಸಲು ಮುಖ್ಯ ಅತಿಥಿಗಳಾಗಿ ಆಗಮಿಸುವಂತೆ ಕೋರಿಕೊಳ್ಳಲಾಯಿತು. ಕರಾವಳಿಯ ಜನರೊಂದಿಗೆ ಕಳೆಯುವ ಈ ಸದವಕಾಶದಲ್ಲಿ ಭಾಗಿಯಾಗುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿ ದಕ್ಷಿಣ ಕನ್ನಡ ಸಂಘದ ಸಾಮಾಜಿಕ ಮತ್ತು ಸೇವಾ ಕಾರ್ಯಗಳಿಗೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮಾತನಾಡಿ ಅಜಯ್ ಸಿಂಗ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಹೆಜ್ಜೆ ಹಾಕಲಿ ಮತ್ತು ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಲ್ಲಿ ಹೊಸ ಶಕೆಯನ್ನು ಪ್ರಾರಂಭಿಸಲು ಎಂದು ಶುಭ ಹಾರೈಸಿದರು. ಹಿರಿಯ ಮುಖಂಡರಾದ ನೀಲಕಂಠ ರಾವ್ ಮೂಲಗೆ, ದತ್ತ ಆರ್. ಚಂದನ್ ಕಲಬುರ್ಗಿ ವಿಮಾನ ನಿಲ್ದಾಣ ರಾಜ್ಯ ಹೋಟೆಲ್ ಅಸೋಸಿಯೇಷನ್ ಸಮಿತಿ ಸದಸ್ಯರಾದ ಪ್ರವೀಣ್ ಜತ್ತನ್, ಉದ್ಯಮಿಗಳಾದ ವೆಂಕಟೇಶ್ ಕಡೇಚೂರ್, ರಾಜೇಶ್ ಡಿ ಗುತ್ತೇದಾರ್, ಸಂಘದ ಸದಸ್ಯರಾದ ದೇವರಾಜ್ ಭಟ್, ಶಂಕರ್ ಚಂದನ್ ಉಪಸ್ಥಿತರಿದ್ದರು