ಡಾ.ಅಜಯಸಿಂಗ್ ಭೇಟಿಯಾದ ಲಕ್ಷ್ಮಣ ದಸ್ತಿ ನಿಯೋಗ

ಕಲಬುರಗಿ ಏ 6 :ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರವಾಗಿ
ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಹಮ್ಮಿಕೊಂಡ ಕಲ್ಯಾಣ ಮಾಡಿ ಇಲ್ಲವೆ ಪ್ರತ್ಯೇಕ ರಾಜ್ಯ ಕೊಡಿ ಎಂಬ
ಘೋಷಣೆಗೆ ಅನುಗುಣವಾಗಿ ಸರಕಾರದ ಮೇಲೆ ಒತ್ತಡ ತರಲು
ಕಲ್ಯಾಣ ನಡೆ ಜನಪ್ರತಿನಿಧಿಗಳ ಕಡೆ ಎಂಬ ಅಭಿಯಾನದಂತೆ ಇಂದು
ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ಜೇವರ್ಗಿ ಮತಕ್ಷೇತ್ರದ ಶಾಸಕರಾದ ಡಾ. ಅಜಯಸಿಂಗಅವರ ನಿವಾಸಕ್ಕೆ ಭೇಟಿ ಕೊಟ್ಟು ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವಅನ್ಯಾಯ ಮಲತಾಯಿ ಧೋರಣೆಯ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಪಕ್ಷಾತೀತ ಧೋರಣೆಯಂತೆ ಸಮಿತಿ ಹಮ್ಮಿಕೊಂಡಿರುವ ಈಅಭಿಯಾನಕ್ಕೆ ಸ್ಪಂದಿಸಲು ಅಗ್ರಹಿಸಿ ಅವರಿಗೆ ವಿವರವಾದ ಮನವಿಪತ್ರವನ್ನು ಸಲ್ಲಿಸಲಾಯಿತು.
ಶಾಸಕರಾದ ಅಜಯಸಿಂಗ್ ಅವರ ನಿವಾಸದಲ್ಲಿನಡೆದ ಸಭೆಯಲ್ಲಿ ಸಮಿತಿಯ ಪ್ರತಿನಿಧಿಗಳೊಂದಿಗೆಮಾತನಾಡುತ್ತಾ ಅವರು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆಆಗುತ್ತಿರುವ ಅನ್ಯಾಯದ ಬಗ್ಗೆ ತಮಗೂ ಬಹಳ ಖೇದವಾಗಿದೆ.
ಪ್ರಸ್ತುತ ಸರಕಾರ ಮಾಡುತ್ತಿರುವ ನಿರ್ಲಕ್ಷತನ, ಮಲತಾಯಿ ಧೋರಣೆಗೆ ಕಾಂಗ್ರೇಸ್ ಪಕ್ಷ ಸೇರಿದಂತೆ ನಮ್ಮ ಭಾಗದ ಬಿ.ಜೆ.ಪಿ,ಜನತಾ ದಳ ಎಲ್ಲಾ ಪಕ್ಷದವರು ಸಂಘಟಿತವಾಗಿ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಬೇಕೆಂಬ ಸಮಿತಿಯ ಧೋರಣೆಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದರು. ಕಲ್ಯಾಣ ಕರ್ನಾಟಕದಿಂದ ಸ್ಥಳಾಂತರವಾಗಿರುವ ಕಚೇರಿಗಳು ಮತ್ತು ಸ್ಥಳಾಂತರವಾಗಿರುವ
ಏಮ್ಸ, ಐ.ಐ.ಟಿ. ಮುಂತಾದ ಯೋಜನೆಗಳು ಕಲ್ಯಾಣ ಕರ್ನಾಟಕಕ್ಕೆ ಸಿಗುವ
ನಿಟ್ಟಿನಲ್ಲಿ ತಮ್ಮ ಪಕ್ಷ ಬದ್ಧತೆ ಪ್ರದರ್ಶಿಸುತ್ತದೆ. ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ 371ನೇ(ಜೆ) ಕಲಂ ಪರಿಣಾಮಕಾರಿಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ ಕಲ್ಯಾಣಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ತಾವು ಸೇರಿದಂತೆತಮ್ಮ ಪಕ್ಷ ರಾಜಕಿಯ ಇಚ್ಛಾಶಕ್ತಿಪ್ರದರ್ಶಿಸುವುದಾಗಿ ತಿಳಿಸಿದರು.ಸಮಿತಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಸರ್ವ ಪಕ್ಷಜನಪ್ರತಿನಿಧಿಗಳ ನಾಯಕರ ಪೂಜ್ಯರ, ಆಯಾ ಕ್ಷೇತ್ರದಪ್ರಮುಖರ ಉಪಸ್ಥಿತಿಯಲ್ಲಿ ನಡೆಸಬೇಕೆಂದು ನಿರ್ಧರಿಸಿರುವ ಮಹಾಅಧಿವೇಶನಕ್ಕೆ ಸಂಪೂರ್ಣ ಬೆಂಬಲವಿದ್ದು ತಾವು ಇದಕ್ಕೆ ಎಲ್ಲರೀತಿಯ ಸಹಕಾರ ನೀಡುವುದರ ಜೊತೆಗೆ ತಮ್ಮ ಪಕ್ಷದ ಎಲ್ಲಮುಖಂಡರು ಭಾಗವಹಿಸುವುದಾಗಿ ತಿಳಿಸಿದರು.ಅಭಿಯಾನದಲ್ಲಿ ಸಮಿತಿಯ ಮುಖಂಡರುಗಳಾದ ಮನೀಷಜಾಜು, ಲಿಂಗರಾಜ ಸಿರಗಾಪೂರ, ಡಾ. ಮಾಜಿದ್ ದಾಗಿ, ಶಿವಲಿಂಗಪ್ಪ ಬಂಡಕ್,ಮಹಮ್ಮದ ಮಿರಾಜೊದ್ದೀನ್, ಭದ್ರಶೆಟ್ಟಿ, ಶಾಮ್ ನಾಟಿಕಾರ, ಮಲ್ಲಿನಾಥಸಂಗಶೆಟ್ಟಿ, ಭಗವಂತ್ರಾವ ಪಾಟೀಲ್, ಜ್ಞಾನಮಿತ್ರ ಸ್ಯಮ್ಯುವೆಲ್,ಅಬ್ದುಲ ರಹೀಮ್, ಭವಾನಿಕುಮಾರ ವಳಕೇರಿ, ಶಾಂತಪ್ಪ ಕಾರಭಾಸಗಿ,ಲಿಂಗಣ್ಣ ಉದ್ದನೂರ, ಅಸ್ಲಂ ಚೌಂಗೆ, ವೀರೇಶ ಪುರಾಣಿಕ, ಶಿವಾನಂದಕಾಂದೆ, ರಾಜು ಜೈನ, ಸಬೀರ, ಅಂದ್ರಶೇಖರ ಮೇಕಿನ್, ಆಕಾಶರಾಠೋಡ ಸೇರಿದಂತೆ ಇತರರು ಇದ್ದರು.