ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡಲು ಪ್ರಶಾಂತಗೌಡ ಮನವಿ

ಕಲಬುರಗಿ: ಮೇ.23:ಜೇವರ್ಗಿ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗ್ ರವರು ಸತತವಾಗಿ ಜೀವರ್ಗಿ ವಿಧಾನಸಭಾ ಕ್ಷೇತ್ರದಿಂದ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗುತ್ತಿದ್ದು, ಅವರಿಗೆ ಇಲ್ಲಿಯವರೆಗೆ ಯಾವುದೇ ಸಚಿವ ಸ್ಥಾನವನ್ನು ನಿಡದೆ ಇರುವುದು ಕ್ಷೇತ್ರದ ಜನರಿಗೆ ನೋವಿನ ಸಂಗತಿಯಾಗಿದೆ. ಇವರು ರೈತರ ಪರ, ಬಡವರ ಪರ, ದೀನ, ದಲಿತರ ಪರ, ನೊಂದವರ ಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತ ತಾಲೂಕನ್ನು ಅಭಿವೃದ್ಧಿಯ ಪತ್ರದಲ್ಲಿ ಸಾಗಿಸುತ್ತಿದ್ದು, ಕಳೆದ ಬಾರಿ ಸದನದಲ್ಲಿಯೂ ಕೂಡ ರೈತರ ಪರವಾಗಿ ಧ್ವನಿಯನ್ನು ಎತ್ತಿ ರೈತರ ನೋವಿಗೆ ಸ್ಪಂದಿಸುವ ಕೆಲಸ ಡಾ. ಅಜಯ್ ಸಿಂಗ್ ಅವರು ಮಾಡುತ್ತಿದ್ದಾರೆ. ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಆರ್. ಮಾಲಿಪಾಟೀಲ ಜೈನಾಪೂರ ಹೇಳಿದರು.

ಜೇವರ್ಗಿ ತಾಲೂಕನ್ನು ಇನ್ನಷ್ಟೂ ಅಭಿವೃದ್ಧಿಯ ಪತದಲ್ಲಿ ಸಾಗಿಸಲು ತಮ್ಮ ಸರಕಾರದ ಅವಧಿಯಲ್ಲಿ ಶಾಸಕ ಡಾ. ಅಜಯ್ ಸಿಂಗ್ ಅವರಿಗೆ ಕೂಡಲೇ ಸಚಿವ ಸ್ಥಾನವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರಿಗೆ ಪ್ರಶಾಂತಗೌಡ ಆಗ್ರಹಿಸಿದ್ದಾರೆ.