ಡಾ. ಅಜಯಸಿಂಗ್‍ರಿಗೆ ಸಚಿವ ಸ್ಥಾನ ನೀಡಲು ಹರವಾಳ ಮನವಿ

ಕಲಬುರಗಿ: ಮೇ.22:ಜೇವರ್ಗಿ ವಿಧಾನಸಭಾ ಮತಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಹ್ಯಾಟ್ರಿಕ್ ಗೆಲವು ಸಾಧಿಸಿದಂತ ಮತ್ತು ಬಿಜೆಪಿ ಸರಕಾರದಲ್ಲಿ ವಿರೋಧ ಪಕ್ಷದ ಮುಖ್ಯಸಚೇತಕರಾಗಿ ಕೆಲಸ ಮಾಡಿದ ಅನುಭವ ಇದ್ದಂತಹ ಹಿಂದೂಳಿದ ವರ್ಗದ ಯುವ ನೇತಾರರು ಜೇವರ್ಗಿಯ ಜನಪ್ರಿಯ ಶಾಸಕರಾದ ಡಾ. ಅಜಯಸಿಂಗ್ ಅವರಿಗೆ ಈ ಭಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ ಅವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಟೋಕರೆಕೋಳಿ -ಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಹರವಾಳ ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಹಾಗೂ ಜೇವರ್ಗಿ ಮತ್ತು ಯಡ್ರಾಮಿ ಮತಕ್ಷೆತ್ರದ ಅಭಿವೃದ್ಧಿಗಾಗಿ ಸಮಸ್ತ ಜನತೆಯ ಒತ್ತಾಯದ ಮೇರೆಗೆ ಪ್ರಸಕ್ತ ಸರಕಾರದಲ್ಲಿ ಯುವಕರ ಆಶಾಕಿರಣ, ಹಿಂದೂಳಿದ ಅಲ್ಪಸಂಖ್ಯಾತರ ಶೋಷಿತ ವರ್ಗಗಳ ಪರವಾಗಿ ಹಾಗೂ ಕರ್ನಾಟಕ ರಾಜ್ಯ ಟೋಕರೆಕೋಳಿ -ಕಬ್ಬಲಿಗ ಸಂಘದ ವತಿಯಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ ಅವರಿಗೆ ಹರವಾಳ ಆಗ್ರಹಿಸಿದ್ದಾರೆ.