ಡಾ ಅಜಯಸಿಂಗರಿಗೆ ಸಚಿವ ಸ್ಥಾನ ನೀಡಲು ಅಶೋಕ್ ಆಗ್ರಹ

ಜೇವರ್ಗಿ :ಮೇ 23: ಕಾಂಗ್ರೇಸ್ ಪಕ್ಷದಿಂದ ಸತತವಾಗಿ ಮೂರು ಬಾರಿ ಜಯಗಳಿಸಿದ ಹ್ಯಾಟ್ರಿಕ್ ಶಾಸಕ ಡಾ ಅಜಯಸಿಂಗ್ ರವರಿಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಅಶೋಕ ಕೋಬಾಳ ಕೊನಾ ಹಿಪ್ಪರಗಾ ,ಮಲ್ಲಿನಾಥ ನಾಯಿಕೊಡಿ,ರಾಜಶೇಖರ್ ಜಾಡಿ ಕೋನಾ ಹಿಪ್ಪರಗಾ ಅವರು ಒತ್ತಾಯಿಸಿದ್ದರೆ.ಮಾಜಿ ಮುಖ್ಯಮಂತ್ರಿ ದಿ, ಎನ್ ಧರ್ಮಸಿಂಗ್ ರ,ತಂದೆಯ ಹಾದಿಯಲ್ಲೇ ಸಾಗಿದ ಡಾ ಅಜಯಸಿಂಗ್ ಅವರು ಜೇವರ್ಗಿ ತಾಲೂಕಿನ ಜನತೆಯ ದೀನ ದಲಿತರ ,ಸರ್ವ ಧರ್ಮ, ಸರ್ವ ಜಾತಿಗಳನ್ನು ಪ್ರೀತಿಸುವರಾಗಿದ್ದಾರೆ.ತಾಲೂಕಿನ ಜನರ ನಾಡಿ ಮಿಡಿತದಲ್ಲಿ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಬಡವರ ಕಷ್ಟ ಸುಖದಲ್ಲಿ ಸದಾ ಭಾಗಿಯಾಗಿದ್ದು.ಮೂರು ಬಾರಿ ಶಾಸಕರಾಗಿ ಅಪಾರ ಅನುಭವವಿದ್ದು, ಈ ಹಿಂದೆ ವಿಧಾನಸಭೆ ವಿರೋದ ಪಕ್ಷದ ಮುಖ್ಯ ಸಚೇತಕರಾಗಿಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಜೇವರ್ಗಿ ತಾಲೂಕಿನ ಜನತೆಯ ಮತದಾರ ಪ್ರಭು ಸತತವಾಗಿ ಮೂರು ಬಾರಿ ಆಶೀರ್ವಾದ ಮಾಡಿ ವಿಧಾನಸೌಧಕ್ಕೆ ಕಳಿಸಿದ್ದಾರೆ.ಆದ್ದರಿಂದ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನು ನೀಡುವ ಮೂಲಕ ತಾಲೂಕ ಅಭಿವೃದ್ದಿಪಡಿಸಲು ಡಾ,ಅಜಯಸಿಂಗ್ ರ ಕೈ ಬಲ ಪಡಿಸಬೇಕೆಂದು ಅವರು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.