ಡಾ.ಅಗಸರಗೆ ಜ್ಞಾನಜ್ಯೋತಿ ಪ್ರಶಸ್ತಿ ಪ್ರದಾನ

ಕಲಬುರಗಿ,ನ.17-ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ದಯಾನಂದ ಅಗಸರ ಅವರು ಶೈಕ್ಷಣಿಕ, ಸಂಶೋಧನೆ, ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಕಲಬುರ್ಗಿಯ ಸ್ವರ ಮಾಧುರಿ ಸಂಗೀತ ವಿದ್ಯಾಲಯವು ಮಂಗಳವಾರ ಜ್ಞಾನ ಜ್ಯೋತಿ ಪ್ರಶಸ್ತಿಯನ್ನು ವಿಶ್ವವಿದ್ಯಾಲಯದ ಅವರ ಕಾರ್ಯಾಲಯದಲ್ಲಿ ನೀಡಿ ಗೌರವಿಸಿತು.
ಈ ಸಂದರ್ಭದಲ್ಲಿ ಪೆÇ್ರ.ಮಹೇಶಕುಮಾರ ಬಡಿಗೇರ,ರಾಜಶೇಖರ ಸರಸಂಬಿ, ಶಾಮ್ ನಾಟಿಕರ,ವೀರಣ್ಣ ಜಮಾದಾರ , ಎಸ್. ಎಸ್. ಹಿರೇಮಠ ಹಾಗೂ ಮತ್ತೀತರರು ಇದ್ದರು.