ಡಾ.ಅಂಬೇಡ್ಕರ ವಿಶ್ವ ನಾಯಕ


ಧಾರವಾಡ ಎ.11-ಇಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕರ್ನಾಟಕ ಧಾರವಾಡ ಉಚ್ಛ ಶಿಕ್ಷಣ ಮತ್ತು ಶೋಧ ಸಂಸ್ಥಾನ ಹಾಗು ಸಾಮರಸ್ಯ ವೇದಿಕೆಯ ಸಹಯೋಗದಲ್ಲಿ ಭಾರತ ರತ್ನ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ 130ನೆ ಜಯಂತಿ ಅಂಗವಾಗಿ ಅಂಬೇಡ್ಕರ್ ಹಾಗೂ ರಾಷ್ಟ್ರೀಯತೆ ವಿಚಾರ ಸಂಕೀರ್ಣ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪುರುಷೊತ್ತಮ ಟಂಡನ ಭವನದ ಪ್ರಾಂಗಣದಲ್ಲಿ ಜರುಗಿತು.
ಸಂವಿಧಾನಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ 130ನೆ ಜಯಂತಿಯ ಶುಭಪರ್ವದಂದು ಅಂಬೇಡ್ಕರ್ ಹಾಗೂ ರಾಷ್ಟ್ರೀಯತೆ ವಿಚಾರ ಸಂಕೀರ್ಣದ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಶ್ರೀಧರ ನಾಡಿಗೇರ ಅವರು ಡಾ ಬಾಬಾಸಾಹೇಬ ಅವರು ಕೇವಲ ಒಂದು ಜಾತಿ ವರ್ಗಕ್ಕೆಸೀಮಿತರಲ್ಲ ಅವರು ಮಾನವತಾವಾದಿಗಳು ಪ್ರತಿಯೊಂದು ಜೀವಿಗು ಹಕ್ಕು ನೀಡಿದ ನಾಯಕ ವಿಶ್ವನಾಯಕ ಅವರು ಹಿಂದು ಧರ್ಮದ ತೊಡಕುಗಳನ್ನ ವಿರೋಧಿಸಿ ನ್ಯಾಯ ದೊರಕಿಸಿದವರು ಹಾಗು ವಿಶೇಷವಾಗಿ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕು ಹಾಗು ರಿಸರ್ವ ಬ್ಯಾಂಕ ಸ್ಥಾಪಿಸಿ ಭಾರತದ ಆರ್ಥಿಕತೆ ಬಗ್ಗೆ ವಿಶೇಷ ಕಾಳಜಿ ವಹಿಸಿದರು ಅಂಬೇಡ್ಕರ ಅಂತ ನುಡಿದರು.
ವಿಶೇಷ ಉಪನ್ಯಾಸಕರು ಪೆÇ್ರ ತೇಜಸ್ವಿ ಕಟ್ಟಿಮನಿ ಮಾನ್ಯ ಕುಲಪತಿಗಳು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಅವರಿಂದ ಉಪನ್ಯಾಸ ನೀಡುವಾಗ ಮಾತನಾಡಿಸಂವಿಧಾನ ರಚನಾಕಾರ ಹಾಗು ಮೂಲಭೂತ ಹಕ್ಕುಗಳನ್ನ ಪ್ರತಿಯೊಬ್ಬರಿಗೆ ನೀಡಿ ಅರಮನೆಯಲ್ಲಿರೊ ಶ್ರೀಮಂತನಿಗು ಒಂದೆ ಮತ ಬಡವನಿಗು ಒಂದೆ ಮತದ ಮೂಲಕ ಮತದಾನ ಮಾಡಿ ನಾಯಕನ ಆಯ್ಕೆ ಮಾಡುವ ಹಕ್ಕು ನೀಡಿದ್ದು ಭಾರತ ರತ್ನ ಡಾ ಬಾಬಾಸಾಹೇಬ ಅವರು ಅವರು ಜಗತ್ತಿಗೆ ಮಾದರಿ ವ್ಯಕ್ತಿ ಅಂತ ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಈರೇಶ ಅಂಚಟಗೇರಿ ಸಾಮರಸ್ಯ ವೇದಿಕೆ ಸಂಯೋಜಕರು ಶ್ರೀಧರ ಜೋಶಿ ವಿಶೇಷ ಅಹ್ವಾನಿತರು ಅರುಣ ಜೋಶಿ ಹಾಗು ಎಂ ಆರ ಪಾಟೀಲ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ವಿಶೇಷ ಕಾರ್ಯದರ್ಶಿಗಳು ಎಸ ಬಿ ಹಿಂಚಿಗೇರಿ ಕಾರ್ಯದರ್ಶಿಗಳು ಡಾ ರಾಧಾಕೃಷ್ಣನ್ ವಿಭಾಗಾಧ್ಯಕ್ಷರು ಪೆÇ್ರಅಮರಜ್ಯೋತಿ ಸಂಯೋಜಕರು ರಾಜಕುಮಾರ ನಾಯಕ ಅವರ ಘನಉಪಸ್ಥಿತಿಯಲ್ಲಿ ಹಾಗು ಶಿಕ್ಷಕವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.