ಡಾ.ಅಂಬೇಡ್ಕರ ಜಯಂತ್ಯೋತ್ಸವ ಪ್ರಯುಕ್ತ ಕೋವಿಡ್ ವಾಕ್ಸಿನ್ ಲಸಿಕಾ ಕಾರ್ಯಕ್ರಮ

ವಿಜಯಪುರ, ಎ.4-ನಗರದ ಗ್ಯಾಂಗ ಬಾವಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ ಜಯಂತ್ಯೋತ್ಸವದ ಅಂಗವಾಗಿ ಓಂ ಗಣಪತಿ ದೇವಸ್ಥಾನದಲ್ಲಿ ಕೋವಿಡ್ ವಾಕ್ಸಿನ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಮಹಾನಗರಪಾಲಿಕೆ ಸದಸ್ಯರಾದ ಉಮೇಶ ವಂದಾಲ ಅವರು ಮಾತನಾಡಿ ಕೋವಿಡ್ ವಾಕ್ಸಿನ್ ಹಾಕಿಕೊಳ್ಳುವುದರಿಂದ ಹಿರಿಯರಿಗೆ ಅನಾಹುತದಿಂದ ತಪ್ಪಿಸಬಹುದು. ರೋಗ ನಿರೋಧಕ ಶಕ್ತಿ ಇರುವದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಮಾತನಾಡಿ ಆರೋಗ್ಯ ಇಲಾಖೆ ಹಗಲಿರುಳು ಎನ್ನದೆ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಆರೋಗ್ಯ ಇಲಾಖೆ ಜೊತೆ ಕೈ ಜೊಡಿಸಿ ಎಲ್ಲಾ ಬಡಾವಣೆಗಳಲ್ಲಿಯೂ ಇಂತಹ ಕಾರ್ಯಕ್ರಮ ಮಾಡಿ ಕೋವಿಡ್ ವಾಕ್ಸಿನ್ ಹಾಕಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.
ತಾಲೂಕಾಧಿಕಾರಿ ಡಾ. ಕವಿತಾ ದೊಡಮನಿ ಮಾತನಾಡಿ 45 ವರ್ಷ ಮೇಲ್ಪಟ್ಟವರು ಎಲ್ಲ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ವಾಕ್ಸಿನ್ ಹಾಕಿಸಿಕೊಳ್ಳುವುದರ ಮೂಲಕ ಕೊರೋನಾದಂತಹ ಮಹಾಮಾರಿ ರೋಗದಿಂದ ಮುಕ್ತಿ ಹೊಂದಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬೋಧಿದಮ್ ಬಂತೇಜಿ ಮಾತನಾಡಿ ಸರಕಾರ ಇಂತಹ ಉಚಿತ ವಾಕ್ಸಿನ ತಯಾರಿಸಿ ಸಾರ್ವಜನಿಕರಿಗೆ ಬದುಕಿಗೆ ಬಹಳ ದೊಡ್ಡ ಕಾರ್ಯ ಮಾಡಿದೆ. ನಾವೆಲ್ಲರೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಲ್ಲರೂ ವಾಕ್ಸಿನ್ ಪಡೆದು ರೋಗಮುಕ್ತರಾಗಬೇಕೆಂದರು.
ಈ ಸಂದರ್ಭದಲ್ಲಿ ಡಾ. ಮಹಾದೇವ ನಾಗರಬೆಟ್ಟ, ಕೆ.ಡಿ. ಗುಂಡಬಾವಡಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಶಿವಾನಂದ ಮಾನಕರ, ಸಚೀನ ಸವನಳ್ಳಿ, ಶಿವಾನಂದ ಭೂಯ್ಯಾರ, ಎನ್.ಬಿ. ಚೌಧರಿ, ಎಂ.ಬಿ. ಬೆಣ್ಣೂರ, ಎಂ.ಎಲ್. ಹಡಪದ, ಗುರುರಾಜ ಅಥರ್ಗಾ, ಸಮೀರ ಕುಲಕರ್ಣಿ, ಅನ್ನಪೂರ್ಣಾ, ಕೆಂಬ್ರೋನಿಸಾ, ಶ್ರೀದೇವಿ ಪ್ರಭಾಕರ, ಶಾಂತಾ ಚಲವಾದಿ, ರಾಜಶೇಖರ ಭಜಂತ್ರಿ, ಅಪ್ಪು ಪೆಡ್ಡಿ, ಅನೀಲ ಜೋಶಿ, ಪ್ರಲ್ಹಾದ ಕಾಂಬಳೆ, ಪರಶುರಾಮ ಹೊಸಮನಿ, ರವಿ ಭಜಂತ್ರಿ, ಅರ್ಜುನ ಕವಟೆಕರ ಮತ್ತಿತರರು ಉಪಸ್ಥಿತರಿದ್ದರು.
130 ಜನರಿಗೆ ಕೋವಿಡ್ ವಾಕ್ಸಿನ್ ನೀಡಲಾಯಿತು.