ಡಾ.ಅಂಬೇಡ್ಕರ ಜಯಂತಿಯಂಗವಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆ

ಇಂಡಿ:ಮಾ.13: ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರವರ 132ನೇ ಜನ್ಮದಿನಾಚರಣೆ ನಿಮಿತ್ಯ ಸರಕಾರಿ ಮೆಟ್ರಿಕ್ ನಂತರದ ಎಸ್ಸಿ.ಎಸ್ಟಿ ಬಾಲಕರ ವಸತಿ ನಿಲಯ ಇಂಡಿ ಇವರ ಸಂಯಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ಸ್ಪರ್ಧಾತ್ಕ ಪರೀಕ್ಷೆ ಶ್ರೀಮತಿ ರಮಾಬಾಯಿ ಪ್ರೌಢ ಶಾಲೆ ಕ್ಯಾಂಪ್ಸನಲ್ಲಿರುವ ಬಾಲಕರ ವಸತಿ ನಿಲಯದಲ್ಲಿ ನಡೆಯಿತು.

ಸ್ಪರ್ಧಾತ್ಮಕ ಜಗತ್ತಿನಲ್ಲಿ  ಪರೀಕ್ಷೆಗಳು ಸಾಕಷ್ಟು ಮಹತ್ವ ಪಡೆದುಕೊಂಡಿವೆ. ವಿಧ್ಯಾರ್ಥಿಗಳಿಗೆ ಪರೀಕ್ಷೆಗಳು ಹೇಗೆ ಏದುರಿಸಬೇಕು, ವಸ್ತುನಿಷ್ಠ  ಪ್ರಶ್ನೆಗಳಿಗೆ ಯಾವ ರೀತಿ ಶೆಡ್ ಹಾಕಬೇಕು, ನೂರು ಅಂಕಗಳಿಗೆ ಇಷ್ಟೇ ಸಮಯಾವಕಾಶ  ಪ್ರಶ್ನೆಪತ್ರಿಕೆ ಬಿಡಿಸಲು ಸ್ಪರ್ಧಾಳುಗಳಿಗೆ ಆತ್ಮವಿಶ್ವಾಸ ತುಂಬುವ ಉದ್ದೇಶದಿಂದ  ಸರಕಾರಿ ಮೇಟ್ರೀಕ ನಂತದ ಬಾಲಕ ವಸತಿ

ನಿಲಯ ಮೇಲ್ವೀಚಾರಕ ಆನಂದ .ಎಸ್ ಕಳಸಗೊಂಡ ಇವರು ಸ್ವತ ವಿಧ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಸರಕಾರದಿಂದ ಯಾವುದೇ ನೈಯಾ ಪೈಸ ಪಡೆಯದೆ ನುರಿತ ತಜ್ಞ, ಅನುಭವಿ ಶಿಕ್ಷರಿಂದ ಪ್ರಶ್ನೆ ಪತ್ರಿಕ ತಯಾರಿಸಿ ಇಂದ ರವಿವಾರ 150 ವಿಧ್ಯಾರ್ಥಗಳ ಒಟ್ಟು 3 ಬ್ಯಾಚ್ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 450 ವಿಧ್ಯಾರ್ಥಿಗಳು ಹಾಜರಾಗಿದ್ದು ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿಚೇತರಿಗೆ ಪ್ರಥಮ 5 ಸಾವಿರಬಹುಮಾನ, ದ್ವಿತೀಯ 2ಸಾವಿರದಾ 5ನೂರು,ತೃತೀಯ 1 ಸಾವಿರ ರೂ ಜೊತೆಗೆ ಸಮಾಧಾನ ಬಹಮಾನ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ .