ಡಾ. ಅಂಬೇಡ್ಕರ ಎಲ್ಲರಿಗೂ ದಾರಿದೀಪ: ನರೆಣ್ಣವರ

ಬಾದಾಮಿ, ಜ13- ಆಧುನಿಕ ಭಾರತದ ನಿರ್ಮಾಪಕರಲ್ಲಿ ಡಾ|| ಬಿ.ಆರ್ ಅಂಬೇಡ್ಕರ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಾನ್ ನಾಯಕ. ಶಿಕ್ಷಣತಜ್ಞ, ಸ್ವಾಭಿಮಾನಿ, ಸಂಘಟಣಾಕಾರ, ದಾರ್ಶನಿಕ, ದಲಿತರ ಉದ್ಧಾರಕ ಕರ್ತವ್ಯನಿಷ್ಠರಾದ ಇವರು ಬಹುಮುಖ ಪ್ರತಿಭಾ ಸಂಪನ್ನದಾಗಿದ್ದರು. ಬಾಬಾಸಾಹೇಬರು ಬಡತನದ ಬವಣೆಯಲ್ಲಿ ಬೆಂದು ಸಮಾಜದಲ್ಲಿ ಅವಮಾನಗಳನ್ನು ಅನುಭವಿಸಿ ಉನ್ನತ ಶಿಕ್ಷಣ ಪಡೆದು ಭಾರತದ ಸಂವಿಧಾನ ಬರೆದು ಎಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಶ್ರೀ ಕಾಳಿದಾಸ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ. ಎಸ್. ಹೆಚ್ ನರೆಣ್ಣವರ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬಾಗಲಕೋಟೆ ಹಾಗೂ ಶ್ರೀ ಕಾಳಿದಾಸ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯ, ಬಾದಾಮಿ ಸಹಯೋಗದಲ್ಲಿ ಸಂವಿಧಾನಶಿಲ್ಪಿ ಭಾರತರತ್ನ ಡಾ|| ಬಿ. ಆರ್ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮಾಜಿ ಸಚಿವ, ಸಂಸ್ಥೆಯ ಅಧ್ಯಕ್ಷ ಬಿ.ಬಿ.ಚಿಮ್ಮನಕಟ್ಟಿ, ಕಾರ್ಯದರ್ಶಿ ಭೀಮಸೇನ ಬಿ. ಚಿಮ್ಮನಕಟ್ಟಿ, ಸಂಪರ್ಕಾಧಿಕಾರಿ ಶರಣಗೌಡ ಪಾಟೀಲ, ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭಕೋರಿದರು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಲೋಕಣ್ಣ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಶಿವಯೋಗಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಎಸ್. ಸಿ ಸಾಸಳ್ಳಿ ಮತ್ತು ಬಿ.ಎಸ್ ಮಾಹುಲಿ, ರಾಜೀವ, ಕೃಷ್ಣಾ ಭಜಂತ್ರಿ ಭಾಗವಹಿಸಿದ್ದರು. ಸ್ಪರ್ದಾವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಶಿಕ್ಷಣಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು, ಪ್ರಶಿಕ್ಷಣಾರ್ಥಿ ವ್ಹಿ.ಪಿ ಡೊಳ್ಳಿನ ನಿರೂಪಣೆ ಮಾಡಿದರು.