ಡಾ. ಅಂಬೇಡ್ಕರ ಅವರಿಗೆ ಅವಮಾನ ಕಿಡಿಗೇಡಿಗಳನ್ನು ಬಂಧಿಸುವಂತೆ ಮನವಿ

ವಿಜಯಪುರ, ಡಿ.8-ಡಾ. ಅಂಬೇಡ್ಕರ ಅವರಿಗೆ ಅವಮಾನ ಮಾಡಿದ ಕಿಡಗೇಡಿಗಳ ಮೇಲೆ ಕ್ರಿಮಿನಲ್ ಮುಕದ್ದಮೆ ಹಾಕಿ ಕ್ರಮ ಕೈಗೊಳ್ಳುವ ಕುರಿತು ಬಿ.ಸಿ.ಎಮ್. ಹಾಸ್ಟೆಲ್ ವಿದ್ಯಾರ್ಥಿಗಳಿಂದ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಜಿತೇಂದ್ರ ಕಾಂಬಳೆ ಮಾತನಾಡಿ, ಪ.ಜಾ./ಪ.ಪಂ. ವಸತಿ ನಿಲಯ ಬುತ್ನಾಳ ಕ್ರಾಸ್ ವಿಜಯಪುರದಲ್ಲಿ ಕಿಡಗೇಡಿಗಳಾದ ತೇಜು ಚವ್ಹಾಣ, ಮಹೇಶ ರಾಠೋಡ, ವಿನೋದ ರಾಠೋಡ ಇವರು ಹಾಗೂ ಇತರೆ 7ರಿಂದ 8 ಜನರು ಕೂಡಿಕೊಂಡು ನಿನ್ನೆ ಅಂಬೇಡ್ಕರ ಅವರ ಮಹಾಪರಿನಿರ್ವಾಹಣ ದಿನದ ನಿಮಿತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕಿಡಗೇಡಿಗಳು ಅಂಬೇಡ್ಕರರವರಿಗೆ ಅವಮಾನವಾಗುವ ಶಬ್ದಗಳನ್ನು ಬಳಸಿ ನಿಂದಿಸಿ ನಮ್ಮ ಮೇಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
ಸಂಜು ಕಂಬಾಗಿ ಕರ್ನಾಟಕ ದಲಿತ ಸಂಘರ್ಷ ಸಮಿರ್ತಿ (ಅಂಬೇಡ್ಕರ ವಾದ) ಜಿಲ್ಲಾ ಪ್ರಧಾನ ಸಂಚಾಲಕರು, ಸಂತೋಷ ಅಂಜುಟಗಿ, ಅಭಿಷೇಕ ಕಟ್ಟಿಮನಿ, ಬಿಲಾಣಿ ಸಿದ್ದಿ, ನಾಗಪ್ಪ ಐಹೊಳ್ಳೆ, ಅಮಸಿದ್ಧ ವಾಲಿಕಾರ, ಸಾಗರ ಬಗಲಿ, ಗಂಗಾಧರ ನಾಯ್ಕೋಡಿ, ಶಿವರುದ್ರ ಹೊಸಮನಿ ಮತ್ತು ಮುಂತಾದವರು ಉಪಸ್ಥಿತರಿದ್ದರು.