ಡಾ. ಅಂಬೇಡ್ಕರ್ ಸರ್ವ ಶ್ರೇಷ್ಠ ಚಿಂತಕ: ಹಲ್ಲಾಳ


ಧಾರವಾಡ,ಏ.16: ಡಾ. ಬಿ.ಆರ್.ಅಂಬೇಡ್ಕರಅವರುಜಾಗತಿಕ ಮಟ್ಟದಲ್ಲಿಒಬ್ಬ ಸರ್ವ ಶ್ರೇಷ್ಠ ಚಿಂತಕರಾಗಿದ್ದರು.ಅವರಲ್ಲಿದ್ದ ವಿದ್ವತ್, ಅಧ್ಯಯನಶೀಲತೆ ಅಗಾಧವಾಗಿತ್ತುಎಂದು ಕ.ವಿ.ವಿ. ವಿಶ್ರಾಂತ ಮನೋವಿಜ್ಞಾನ ಪ್ರಾಧ್ಯಾಪಕಡಾ.ಪಿ.ಎಸ್. ಹಲ್ಯಾಳ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರಅವರ 132ನೇ ಜನ್ಮದಿನದ ಪ್ರಯುಕ್ತಅಂಬೇಡ್ಕರಅವರ ಚಿಂತನೆಗಳು ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡಿದರು.
ಡಾ. ಬಿ.ಆರ್.ಅಂಬೇಡ್ಕರಅವರುತಮ್ಮಜೀವನದಲ್ಲಿ ಎಷ್ಟೇ ಅವಮಾನವಾದರೂ ದೃತಿಗೆಡ ದೆದೇಶದ ಬಗ್ಗೆ ದೀನ ದಲಿತರ ಬಗ್ಗೆ ಕಿಂಚಿತ್ತುಗೌರವ ಭಾವನೆಕಡಿಮೆ ಮಾಡಿಕೊಳ್ಳಲಿಲ್ಲ. ಅವರಲ್ಲಿದ್ದ ಬೌದ್ಧಿಕ ಸಾಮಥ್ರ್ಯ ಅಗಾಧವಾಗಿತ್ತು. ಇಡೀ ಜಗತ್ತಿನ ಮೇಲೆ ಪ್ರಭಾವ ಬೀರಿದಅಸಾಧಾರಣ ವ್ಯಕ್ತಿಗಳಾಗಿದ್ದರು.ಇಂದು 192 ದೇಶಗಳಲ್ಲಿ ಅವರಜನ್ಮದಿನ ಆಚರಿಸಲಾಗುತ್ತಿದ್ದುಅವರ ಮೇರು ವ್ಯಕ್ತಿತ್ವವೇಕಾರಣ.
ಶ್ರೇಷ್ಠ ಶಿಕ್ಷಣ ತಜ್ಞರಾದಡಾ.ಬಿ.ಆರ್.ಅಂಬೇಡ್ಕರ್‍ಅವರು, ನಾವು ಪಡೆದ ಶಿಕ್ಷಣ ನಮ್ಮಅಂತರಂಗದ ಸಂಸ್ಕøತಿ ಅರಳಿಸಬೇಕು.ನಮ್ಮಲ್ಲಿ ಸನ್ನಡತೆ, ಆತ್ಮಗೌರವಉಂಟು ಮಾಡುವಂತಹದಾಗಿರಬೇಕೆಂಬ ಉದಾತ್ತ ಭಾವನೆ ಹೊಂದಿದ್ದರು.ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ರಾಜಕೀಯ ವ್ಯವಸ್ಥೆಅಲ್ಲ. ಪ್ರತಿಯೊಬ್ಬರ ಹೃದಯದಲ್ಲಿ ಆ ಭಾವನೆಉದಯಿಸಬೇಕು ಎಂದರು.
ಕ.ವಿ.ವ. ಸಂಘದಕಾರ್ಯಾಧ್ಯಕ್ಷರಾದ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವತಂತ್ರ ಭಾರತಕ್ಕೊಂದು ಸಂವಿಧಾನರಚನೆ ಮಾಡುವ ಪ್ರಶ್ನೆ ಬಂದಾಗ, ಪಂಡಿತ ನೆಹರುಅವರುಅಂತಾರಾಷ್ಟ್ರೀಯಖ್ಯಾತ ಸಂವಿಧಾನತಜ್ಞರಾದ ಸರ್. ಐನರ್‍ಜಿನಿಂಗಅವರನ್ನು ಭಾರತಕ್ಕೆಆಹ್ವಾನಿಸಬೇಕೆಂಬ ವಿಚಾರದಲ್ಲಿದ್ದಾಗ, ಗಾಂಧೀಜಿಯವರು ನಮ್ಮದೇಶದ ಸಂಸ್ಕøತಿ ವಿಚಾರಬಲ್ಲ ಭಾರತೀಯರೇ ನಮ್ಮ ಸಂವಿಧಾನರಚಿಸಬೇಕೇ ವಿನ: ವಿದೇಶಿ ತಜ್ಞರಲ್ಲ. ನಮ್ಮವರೇಆದಡಾ.ಬಿ.ಆರ್.ಅಂಬೇಡ್ಕರಅವರು ಸೂಕ್ತ ವ್ಯಕ್ತಿಎಂದು ತಿಳಿಸಿದರು.ಒಪ್ಪಿದ ನೆಹರುಅವರುಡಾ.ಅಂಬೇಡ್ಕರಅವರನ್ನು ಈ ಸಂವಿಧಾನಕರಡು ಸಮಿತಿಯಅಧ್ಯಕ್ಷರನ್ನಾಗಿ ನೇಮಕ ಮಾಡಿದರು.ಅಂಬೇಡ್ಕರಜಯಂತಿಒಂದು ದಿನಕ್ಕೆ ಸೀಮಿತವಾಗದೇ ಅವರನ್ನು ನಿತ್ಯ ಸ್ಮರಿಸುವಕಾರ್ಯವಾಗಬೇಕುಎಂದು ಹೇಳಿದರು.
ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಾಲಬಳಗ ಶಾಲೆಯ ಶಿಕ್ಷಕಿಯರು ಪ್ರಾರ್ಥಿಸಿದರು.ಡಾ. ಅಂಬೇಡ್ಕರ ಭಾವಚಿತ್ರಕ್ಕೆಗಣ್ಯರು ಪುಷ್ಪನಮನ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು.ಶಂಕರ ಕುಂಬಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಡಾ.ಜಿನದತ್ತ ಹಡಗಲಿ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಬಿ.ಎಲ್. ಪಾಟೀಲ.ಎಂ.ಎಂ.ಚಿಕ್ಕಮಠ ಸೇರಿದಂತೆ ಮುಂತಾದವರಿದ್ದರು.