ಹುಮನಾಬಾದ್:ಮಾ.25: ಪಟ್ಟಣದ ಕಠಳ್ಳಿ ರಸ್ತೆಯ ಟೀಚರ್ ಕಾಲೋನಿಯ ಸಿದ್ದಾರ್ಥ ನಗರದಲ್ಲಿ ಶುಕ್ರವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಭವನದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದ ಸವಾರ್‍ಂಗಿಣ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ಸಂವಿಧಾನವೇ ಮೂಲ ಕಾರಣ. ಸಮಾನತೆ ಪರಿಕಲ್ಪನೆಯಿಂದ ಭಾರತ ದೇಶಕ್ಕೆ ಅಪಾರ ಕೊಡುಗೆ ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ದಲಿತ, ಶೋಷಿತ ವರ್ಗದ ಬಡಜನರಿಗೆ ಅತ್ಯಂತ ಅನುಕೂಲಕರ ಅವಕಾಶಗಳನ್ನು ಸಂವಿಧಾನ ನೀಡಿದೆ ಎಂದರು.
ಪಟ್ಟಣದ ಟೀಚರ್ ಕಾಲೋನಿಯ ಸಿದ್ದಾರ್ಥ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ 2.5 ಕೋಟಿ ರೂ. ಅನುದಾನ ನೀಡಲಾಗಿದೆ.
ಜತೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪರ ಯೋಜನೆಗಳು ಕೈಗೊಂಡು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಪುರಸಭೆ ಸದಸ್ಯ ಅಪ್ಸರಮಿಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜ ಅರಸ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾಳಶೆಟ್ಟಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್, ತಾಲೂಕು
ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ತಾಪಂ ಮಾಜಿ ಸದಸ್ಯ ಬಾಬು ಟೈಗರ್, ಮುಖಂಡರಾದ ಕೃಷ್ಣಪ್ಪ ಹಾಲಗೋರ್ಟೆ, ಸುರೇಶ ಘಾಂಗೆ, ಧರ್ಮರಾಯ ಘಂಗ್ರೆ, ಆಕಾಶ ಗಂಗಶೆಟ್ಟಿ, ರಾಹುಲ್ ಉದ್ಘಾ ಶರಣಪ್ಪ ದಂಡೆ, ಜೈಕುಮಾರ ಸಿಂಧೆ, ಮಲ್ಲಿಕಾರ್ಜುನ್ , ಗೌತಮ ಸಾಗರ, ಶಿವಪುತ್ರ ಮಾಳಗೆ, ಜಗನ್ನಾಥ್ ಕಠಳ್ಳಿ , ಈಶ್ವರ್ ಕಠಳ್ಳಿ ಸೇರಿ ಅನೇಕರಿದ್ದರು.