ಡಾ.ಅಂಬೇಡ್ಕರ್ ವೃತ್ತ ನವೀಕರಣ ಕಾಮಗಾರಿಗೆ ಚಾಲನೆ

ದೇವದುರ್ಗ.ಅ.೩೦- ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ನವೀಕರಣ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ.ನಾಯಕರವರು ಇಂದು ಚಾಲನೆ ನೀಡಿದರು.
ಪುರಸಭೆಯ ೨೦೧೯-೨೦ ಹಾಗೂ ೨೦೨೧-೨೨ನೇ ಸಾಲಿನ ಎಸ.ಎಫ್. ಐ ಉಳಿತಾಯ ಅನುದಾನದ ೧೨.೨೫ ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕುವಂತಾಗಿದೆ. ಬಡವರು, ದಲಿತರು, ಹಿಂದುಳಿದ ವರ್ಗದ ಜನರಿಗೆ ಸಂವಿಧಾನವೇ ಗ್ರಂಥವಾಗಿದೆ.
ಅಂಬೇಡ್ಕರ್ ವೃತ್ತ ನವೀಕರಣ ಕಾಮಗಾರಿ ೧೨ಲಕ್ಷ ರೂ. ಅನುದಾನ ಮಂಜೂರಾಗಿದೆ. ವೃತ್ತವನ್ನು ಸುಂದರವಾಗಿ ನಿರ್ಮಾಣ ಮಾಡಲಾಗುವುದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧಳಾಗಿದ್ದು ಜನರ ಸಹಕಾರ ಅಗತ್ಯವಾಗಿದೆ. ನಿಮ್ಮ ಸಲಹೆ ಸೂಚನೆ ನೀಡುವ ಜತೆಗೆ ಯಾವುದೇ ಸಮಸ್ಯೆ ಇದ್ದರೂ ನನಗೆ ತಿಳಿಸಿದರೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟೆ, ಪಿಡಬ್ಲ್ಯುಡಿ ಎಇಇ ಬಕ್ಕಪ್ಪ ಹೊಸಮನಿ, ಪುರಸಭೆ ಮುಖ್ಯಾಧಿಕಾರಿ ಹಂಪಯ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಬಸವರಾಜ್, ವೆಂಕಟೇಶ್, ಮಕ್ತಾಲ್, ಪಿಐ ಅಶೋಕ ಸದಲಗಿ ಇತರರಿದ್ದರು.