ಡಾ. ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ವೀರಭದ್ರಪ್ಪ ಉಪ್ಪಿನ್

ಬೀದರ:ಏ.15:ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡಕರ ರವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಆಳವಡಿಸಿ ಕೊಂಡಾಗ ಮಾತ್ರ ಜಯಂತಿ ಆಚರಣೆಯು ಸಾರ್ಥಕ ವಾಗುತ್ತದೆ ಎಂದು ಪಶು ವೈದ್ಯಕೀಯ ವಿಶ್ವ ವಿದ್ಯಾಲಯ ದ ನಿವೃತ್ತ ಅಧಿಕಾರಿ ವೀರ ಭದ್ರಪ್ಪ ಉಪ್ಪಿನ್ ರವರು ಅಭಿಪ್ರಾಯ ಪಟ್ಟರು. ಅವರು ಇಂದು ಕಾರಂಜಾ ಸಂತ್ರಸ್ತರ ಧರಣೀ ಸ್ಥಳದಲ್ಲಿ ಡಾಕ್ಟರ್ ಬಿ. ಆರ್.ಅಂಬೇಡಕರ್ ರವರ 133 ನೇ ಜಯಂತ್ಯುತ್ಸವದಲ್ಲಿ ಮಾತನಾಡುತ್ತಿದ್ದರು. ಬಾಬಾ ಸಾಹೇಬ್ ರು ದಿನದ 17 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಬಹುಭಾಷಾ ಪ್ರವೀಣರಾಗಿದ್ದ ಅವರು ಅನೇಕ ಭಾಷೆಗಳಲ್ಲಿ ಪಿಎಚಡಿ ಮಾಡಿದ್ದರು. ಕಠಿಣ ಪರಿಶ್ರಮ ಮಾಡುವ ಮೂಲಕ ನೈತಿಕತೆ ಯನ್ನು ಜೀವನದಲ್ಲಿ ಆಳವಡಿಸಿ ಕೊಂಡಿದ್ದರು. ಅವರ ಆದರ್ಶ ಗಳನ್ನು ಶ್ರದ್ಧೆಯಿಂದ ಪಾಲಿಸಿ ದರೆ ಅದು ಬಾಬಾಸಾಹೇಬ್ ರಿಗೆ ನೀಡುವ ನಿಜವಾದ ಗೌರವ ವಾಗುತ್ತದೆ ಎಂದು ನುಡಿದರು. ಕಳೆದ 656 ದಿವಸಗಳಿಂದ ತಮ್ಮ ಜಮೀನಿನ ವೈಜ್ಞಾನಿಕ ಪರಿಹಾರಕ್ಕಾಗಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲರವರು ಸರ್ಕಾರವನ್ನು ಆಗ್ರಹಿಸಿದರು. ಸದಸ್ಯರಾದ ಕಲ್ಯಾಣರಾವ ಚನಶೆಟ್ಟಿಯವರು ಅಹೋರಾತ್ರಿ ಧರಣಿ ನಡೆದು ಬಂದ ದಾರಿ ಯನ್ನು ವಿವರಿಸಿದರು. ಪದ್ಮಾನoದ ಗಾಯಕವಾಡ, ಕಾಶೀನಾಥ ಭಾಲಕಿ, ರಾಜಪ್ಪ ಕೋಸಮ್ ಕಮಾಲಪುರ್, ಬಸಮ್ಮ,ಮಾದಪ್ಪ ಖೌದಿ, ಬಸವರಾಜ ಹಿಂದಾ, ಸುಭಾಷ ಮುಂತಾದವರು ಹಾಜರಿದ್ದರು