ಧಾರವಾಡ,ಏ.14: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಇಲ್ಲಿನ ಜುಬ್ಲಿ ಸರ್ಕಲ್ ಬಳಿಯ ಡಾ.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಶಾಸಕ ಅಮೃತ ದೇಸಾಯಿ ಮಾತನಾಡಿ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾದರಿ ನಾಯಕರಾಗಿದ್ದು, ಅವರು ಭಾರತ ಕಂಡ ಶ್ರೇಷ್ಠ ನಾಯಕರಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಡಾ.ಅಂಬೇಡ್ಕರ್ ಅವರು ರಚಿಸಿದ ಯೋಜನೆಗಳು ವಿಶಿಷ್ಟವಾಗಿವೆ. ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೇವಲ ಹಿಂದುಳಿದ ವರ್ಗಕ್ಕೆ ಅಷ್ಟೇ ಅಲ್ಲದ ಸರ್ವ ಸಮುದಾಯದ ಮಹಾನ್ ನಾಯಕರಾಗಿದ್ದಾರೆ. ಸಮಾಜದ ವಂಚಿತ ಮತ್ತು ಶೋಷಿತ ವರ್ಗಗಳ ಸಬಲೀಕರಣಕ್ಕಾಗಿ ಶ್ರಮಿಸಿದ ಡಾ.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳು ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಉಸ್ತುವಾರಿಗಳಾದ ಅಮಿತ್ ಶಾ, ಶಾಸಕ ಅರವಿಂದ ಬೆಲ್ಲದ, ಶಂಕರ ಮುಗದ, ಸುನಿಲ್ ಮೊರೆ, ಈರಣ್ಣ ಹಪ್ಪಲಿ, ನಿತಿನ್ ಇಂಡಿ, ಶಂಕರ ಶೇಳಕೆ, ಬಸವರಾಜ ರುದ್ರಾಪುರ, ವೀರೇಶ ಹಿರೇಮಠ ಹಾಗೂ ಶಕ್ತಿ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.