
ದೇವದುರ್ಗ,ಮಾ.೦೩- ಜಗತ್ತಿನಲ್ಲಿ ಇಂದು ಅಶಾಂತಿ ತಲೆದೂರಿದ್ದು ಭಯ, ಭೀತಿ, ಯುದ್ಧದ ಕಾರ್ಮೋಡ ಆವರಿಸಿದೆ. ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಜಗತ್ತಿಗೆ ಯುದ್ಧದ ಅಗತ್ಯವಿಲ್ಲ, ಬುದ್ಧನ ಅಗತ್ಯವಿದೆ ಎಂದು ಸಾಹಿತಿ ಬುದ್ಧಗೋಷ್ ದೇವೇಂದ್ರ ಹೆಗಡೆ ಹೇಳಿದರು.
ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಕೃಷ್ಣಾಭಾಗ್ಯ ಜಲ ನಿಗಮದ ಎಸ್‌ಸಿಪಿ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಬುದ್ಧನ ಚಿಂತನೆಗಳು, ವಿಚಾರಗಳು ಹಾಗೂ ಬೋಧನೆಗಳು ಇಂದು ಜಗತ್ತಿಗೆ ಅತ್ಯಗತ್ಯವಾಗಿವೆ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ್ದಾರೆ.
ಗಬ್ಬೂರು ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದ ಅಗತ್ಯವಿತ್ತು. ಶಾಸಕ ಕೆ.ಶಿವನಗೌಡ ನಾಯಕ ವಿಶೇಷ ಆಸಕ್ತಿವಹಿಸಿಕೊಂಡು ೫೦ಲಕ್ಷ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ಇದರಿಂದ ಸುಸಜ್ಜಿತವಾದ ಭವನ ನಿರ್ಮಾಣ ಮಾಡಬಹುದುದಾಗಿದೆ. ಇದು ಬಡವರು ವಿವಿಧ ಕಾರ್ಯಕ್ರಮ ಮಾಡಲು, ಸಂಘಟನೆಗಳು ಸಭೆ ಸಮಾರಂಭ ಮಾಡಲು ಅನುಕೂಲವಾಗಲಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಕೋಳೂರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಗಬ್ಬೂರು ಹೋಬಳಿ ಭಾಗದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಅನುಕೂಲವಾಗಲಿದೆ. ಗುಣಮಟ್ಟದಲ್ಲಿ ಅವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಪೂಜ್ಯ ಶ್ರೀಆದಿತ್ಯರಾಜ ಬನತೇಜಿ, ಶ್ರೀಬೂದಿನಂದ ಬನತೇಜಿ, ಶ್ರೀಸೂಯನ್ ಬನತೇಜಿ, ಸಾವರಸ್ ಬನತೇಜಿ, ಮುಖಂಡರಾದ ಶಿವನಗೌಡ ಮಾಪಾ, ವೆಂಕಟರೆಡ್ಡಿ ಪಾಟೀಲ್, ಪರಮಾನಂದ ದೇಸಾಯಿ, ಶಿವು ಸಾಹುಕಾರ, ವೀರೇಶಗೌಡ, ಗ್ರಾಪಂ ಸದಸ್ಯ ಭೀಮನಗೌಡ, ಮಹೇಶ ಪಾಟೀಲ್, ಸೀತಾರಾಮ್ ಇತರರಿದ್ದರು.