ಡಾ. ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ

ಬೀದರ್: ಮಾ.16:ಇಲ್ಲಿಯ ವಾರ್ಡ್ ಸಂಖ್ಯೆ 16 ರ ವ್ಯಾಪ್ತಿಯ ಪ್ರತಾಪನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ರಹೀಂಖಾನ್ ಚಾಲನೆ ನೀಡಿದರು.

ಎಸ್.ಸಿ.ಪಿ, ಟಿ.ಎಸ್.ಪಿ.ಯ ರೂ. 10 ಲಕ್ಷ ಅನುದಾನದಲ್ಲಿ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಶಾಸಕ ರಹೀಂಖಾನ್, ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ ಹಾಗೂ ಸದಸ್ಯ ವೀರಶೆಟ್ಟಿ ಭಂಗೂರೆ ಅವರ ವಿಶೇಷ ಆಸಕ್ತಿಯಿಂದಾಗಿ ಭವನಕ್ಕೆ ಅನುದಾನ ಮಂಜೂರಾಗಿದೆ ಎಂದು ಯುವ ಮುಖಂಡ ಸೂರ್ಯಕಾಂತ ಸಾಧುರೆ ನುಡಿದರು.

ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ, ಸದಸ್ಯ ವೀರಶೆಟ್ಟಿ ಭಂಗೂರೆ, ಮುಖಂಡರಾದ ಶಶಿಕಾಂತ ಪಾಟೀಲ, ಮಹೇಶ ಮೈಲಾರೆ, ಬಾಬುರಾವ್ ಪಾಸ್ವಾನ್, ಸ್ವಾಮಿದಾಸ ಕೆಂಪೆನೋರ, ಅಂಬರೀಷ್ ಸ್ವಾಮಿ, ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ಸರಸ್ವತಿ ಗಾಯಕವಾಡ್, ಉಪಾಧ್ಯಕ್ಷೆ ಸರಸ್ವತಿ ಪ್ರತಾಪನಗರ, ಕಾರ್ಯದರ್ಶಿ ಕಮಲಮ್ಮ ಅಲಿಯಾಬಾದ್, ಸಹ ಕಾರ್ಯದರ್ಶಿ ಚಿನ್ನಮ್ಮ, ಗುತ್ತಿಗೆದಾರ ಶ್ರೀನಿವಾಸ ಡಿ.ಕೆ, ನಗರಸಭೆಯ ಅಶ್ವಿನಿ, ಪಂಡಿತ ಕಾಂಬಳೆ, ಬಸವರಾಜ ಕಂಡಕ್ಟರ್, ಮಿಲಿಂದ್ ಎಸ್ ಇದ್ದರು.