ಡಾ.ಅಂಬೇಡ್ಕರ್ ಪುತ್ತಳಿಗೆ ಅವಮಾನ ತಪ್ಪಿತಸ್ತರಿಗೆ ಕಠಿಣ ಬಹಿರಂಗ ಶಿಕ್ಷೆಗೆ ಒತ್ತಾಯ

ಕಲಬುರಗಿ:ಜ.24:ದೇಶದ ಸಮಸ್ತ ಜನಾಂಗದ ಕಲ್ಯಾಣಕ್ಕಾಗಿ ಸಂವಿಧಾನದಲ್ಲಿ ಅಧಿಕೃತ ಸ್ಥಾನಮಾನ ನೀಡಿರುವ ಮಹಾನ ದೇಶ ಭಕ್ತ ಸಮಾಜಿಕ ನ್ಯಾಯ ದೊರಕಿಸಿಕೊಟ್ಟ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಪುತ್ತಳಿಗೆ ಅವಮಾನ ಮಾಡಿರುವ ನೀಚ ಸಮಾಜ ಘಾತುಕ ಶಕ್ತಿಗಳಿಗೆ ಪತ್ತೆ ಹಚ್ಚಿ ಅಂತಹ ವ್ಯಕ್ತಿಗಳಿಗೆ ಕಾನೂನು ರೀತ್ಯ ಕಠಿಣವಾದ ಶಿಕ್ಷೆ ನೀಡುವುದರ ಜೊತೆಗೆ ನೀಚ ಕೃತ್ಯವ್ಯಸಗಿದ ವ್ಯಕ್ತಿಗಳಿಗೆ ಬೆತ್ತಲೆ ಮಾಡಿ ಚಪ್ಪಲಿ ಹಾರ ಹಾಕಿ ಕಲಬುರಗಿ ಮುಖ್ಯ ರಸ್ತೆ ಉದ್ದಕ್ಕೂ ಮಾರಿ ಹಾಕಿ ಉಗಿಯುತ್ತಾ ಮೆರವಣಿಗೆ ನಡೆಸಿ ವಿನೂತನ ಮಾದರಿಯ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಅಂದಾಗ ಮಾತ್ರ ಮಹಾ ಪುರುಷರಿಗೆ ಅವಮಾನ ಮಾಡಿ ಸಾಮಾಜಿಕ ಸಾಮರಸ್ಯ ಹಾಳುಮಾಡುವ ಕುಕೃತ್ಯ ಮನಸಿನ ದೇಶ ದ್ರೋಹಿ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಿದಂತಾಗುದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಪೆÇಲೀಸ್ ಆಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಿ ಕಲಬುರಗಿ ಕಲ್ಯಾಣ ಕರ್ನಾಟಕದಿಂದ ದೇಶಕ್ಕೆ ಒಂದು ಸಂದೇಶ ನೀಡುವ ಮೂಲಕ ಮಹಾಪುರುಷರಿಗೆ ಅವಮಾನ ಮಾಡಿದರೆ ಇಂತಹದೊಂದು ಶಿಕ್ಷೆ ನೀಡಿರುವುದು ಮಾದರಿಯಾಗಲಿ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.