ಡಾ.ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಅವಾರ್ಡ್‌ಗೆ ಬಾಜನರಾದ ಪವನ್

ಸಿಂಧನೂರು.ಡಿ.೩- ಡಾ.ಬಿ.ಆರ್ ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಅವಾರ್ಡ್‌ಗೆ ತಾಲೂಕಿನ ದೇವಿಕ್ಯಾಂಪ್ ನಿವಾಸಿ ಫಕಿರಪ್ಪ (ಪವನ್) ಭಾಜನರಾಗಿದ್ದಾರೆಂದು ಅಂಬೇಡ್ಕರ್ ಮಹಾಸಭಾ ಸಂಚಾಲಕರಾದ ಗುರುರಾಜ ಮುಕ್ಕುಂದಾ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡಲ್ಪಡುವ ಈ ಪ್ರಶಸ್ತಿ ಸಮಾಜದಲ್ಲಿ ತಮ್ಮನ್ನು ತಾವು ವಿವಿಧ ರೀತಿಯಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಆರೋಗ್ಯ ದಲ್ಲಿ ಏರು ಪೇರು ಆದಾಗ ತಕ್ಷಣ ತಾನೆ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಬಂದು ಆರೋಗ್ಯದ ಸಮಸ್ಯೆಗಳಗೆ ಸದಾ ಸ್ಪಂದಿಸುತ್ತಾ ಮತ್ತು ಜನ ಸಾಮಾನ್ಯರಿಗೆ ವಿವಿಧ ವಸತಿ ಯೋಜನೆಯಲ್ಲಿನ ಮನೆಗಳನ್ನು ಕೊಡಿಸುವ ಮೂಲಕ ಬಡವರಿಗೆ, ಹಿಂದುಳಿದ ಶೋಷಿತರಿಗೆ ಸದಾ ಸಹಾಯ ಸಹಕಾರ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿರುವ ಈತನಿಗೆ ಡಿ.೧೦ ರಂದು ದೆಹಲಿ ಯಲ್ಲಿ ಕೊಡಲ್ಪಡುವ ಡಾ.ಬಿ.ಆರ್ ಅಂಬೇಡ್ಕರ್ ನ್ಯಾಶನಲ್ ಫೆಲೋಶಿಪ್ ಪ್ರಶಸ್ತಿ ದೊರಕಿದೆ.
ಇವರ ನಿಷ್ಷಲ್ಮಶ ಮನಸ್ಸು, ಬಡವರ ಬಗ್ಗೆ ಸದಾ ಸಹಾಯದ ಹಸ್ತ ಚಾಚುವ ಇವರ ಮನಸ್ಥಿತಿ ಅರಿತು ಅಂಬೇಡ್ಕರ್ ಮಹಾಸಭಾ ವತಿಯಿಂದ ಪ್ರಶಸ್ತಿ ಗೆ ಶಿಪಾರಸ್ಸು ಮಾಡಲಾಗಿತ್ತು ಅದರಂತೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ತುಂಬಾ ಸಂತೋಷದ ವಿಷಯ ಎಂದರು.
ಪ್ರಶಸ್ತಿಗೆ ಆಯ್ಕೆಯಾದ ಫಕೀರಪ್ಪ ಪವನ್ ಮಾತನಾಡಿ, ಅಂಬೇಡ್ಕರ್ ಮಹಾ ಸಭಾ ಸರ್ವ ಸದಸ್ಯರಿಗೂ ಹಾಗೂ ಹಿರಿಯರಾದ ರಾಮರಡ್ಡಿ ಪಗಡದಿನ್ನಿ ಅವರಿಗೆ ಧನ್ಯವಾದಗಳು ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಾಮೇಶ ,ದುರಗೇಶ ಬಾಲಿ ,ಬಸವರಾಜ ಬುಕ್ಕನಹಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.